ನಾನು ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ ಆಗಿದ್ದರೇ ಜಗ್ಗೇಶ್ ರಾಯರ ಮೇಲೆ ಆಣೆ ಮಾಡಲಿ: ವಿಜಯಲಕ್ಷ್ಮಿ
ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ನಂತರ ಬೇರೆ ಬಾಷೆ ಸಿನಿಮಾಗಳಲ್ಲೂ ನಟಿಸಿ ಸಿನಿಮಾ ಜಗತ್ತಿನಿಂದಲೇ ಮರೆಯಾಗಿದ್ದ ವಿಜಯಲಕ್ಷ್ಮಿ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.
Published: 08th July 2021 10:51 AM | Last Updated: 08th July 2021 01:40 PM | A+A A-

ವಿಜಯಲಕ್ಷ್ಮಿ ಮತ್ತು ಜಗ್ಗೇಶ್
ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ನಂತರ ಬೇರೆ ಬಾಷೆ ಸಿನಿಮಾಗಳಲ್ಲೂ ನಟಿಸಿ ಸಿನಿಮಾ ಜಗತ್ತಿನಿಂದಲೇ ಮರೆಯಾಗಿದ್ದ ವಿಜಯಲಕ್ಷ್ಮಿ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಇದೀಗ ನಟಿ ವಿಜಯಲಕ್ಷ್ಮಿ ನವರಸ ನಾಯಕ ಜಗ್ಗೇಶ್ ವಿರುದ್ಧ ಈಗ ಹರಿಹಾಯ್ದಿದ್ದಾರೆ.
ಇತ್ತೀಚೆಗಷ್ಟೇ ವಿಡಿಯೋವೊಂದನ್ನು ಹರಿಬಿಟ್ಟಿರುವ ನಟಿ ವಿಜಯಲಕ್ಷ್ಮೀ, ಅದರಲ್ಲಿ ''ನನ್ನ ಜೀವನದಲ್ಲಿ ಮೊದಲು ದೊಡ್ಡ ವಿವಾದ ಮಾಡಿದ್ದು ನಟ ಜಗ್ಗೇಶ್. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ದೊಡ್ಡ ವಿವಾದ ಮಾಡಿದರು. ನಾಲ್ಕು ತಿಂಗಳು ಹಲವು ಯೂನಿಯನ್‌ಗಳಿಗೆ ನನ್ನನ್ನು ಕರೆಯಿಸಿ ಕ್ಷಮಾಪಣೆ ಕೇಳುವಂತೆ ಮಾಡಿದರು. ಯಾಕೆ ಅಂತಲೇ ನನಗೆ ಅರ್ಥ ಆಗಲಿಲ್ಲ.
ಆ ವಿವಾದ ಆದಾಗ ನನ್ನನ್ನು ಕಾಪಾಡಿದ್ದು ಪಾರ್ವತಮ್ಮ ರಾಜ್‌ಕುಮಾರ್. ಅವರೇ ನನ್ನನ್ನು ಆ ವಿವಾದದಿಂದ ಮುಕ್ತಿ ಕೊಡಿಸಿದರು. ಈಗ ಪಾರ್ವತಮ್ಮ ಅವರ ಜಾಗದಲ್ಲಿ ಶಿವಣ್ಣ ಇದ್ದಾರೆ.
ಜಗ್ಗೇಶ್ ಅವರು ಪ್ರತಿ ಟ್ವೀಟ್‌ಗೆ ರಾಯರನ್ನು ನೆನಪಿಸಿಕೊಳ್ಳುತ್ತಾರೆ. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ಈಗಲೂ ಅವರು ರಾಯರ ಮೇಲೆ ಆಣೆ ಮಾಡಿ ಹೇಳಲಿ. ಅವರು ಹೇಳುವುದಿಲ್ಲ. ಯಾಕಂದರೆ ಅದು ಸುಳ್ಳು. ಆ ಸಮಯದಲ್ಲಿ ನನ್ನ ವೃತ್ತಿ ಜೀವನ ಹಾಳು ಮಾಡಲು ಅವರು ಹಾಗೆ ಮಾಡಿದ್ದರು ಎಂದು ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.