shrikrishna@gmail.com ಶೂಟಿಂಗ್ ಶೀಘ್ರವೇ ಕಂಪ್ಲೀಟ್: ನಿರ್ದೇಶಕ ನಾಗಶೇಖರ್
ತೆಲುಗು ಮತ್ತು ಕನ್ನಡ ಸಿನಿಮಾ ನಿರ್ದೇಶನಗಳಲ್ಲಿ ಬ್ಯುಸಿಯಾಗಿರುವ ನಾಗಶೇಖರ್ ಇನ್ನೂ ಕೆಲವೇ ದಿನಗಳಲ್ಲಿ shrikrishna@gmail.com ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ.
Published: 15th July 2021 02:04 PM | Last Updated: 15th July 2021 02:09 PM | A+A A-

shrikrishna@gmail.com ಸಿನಿಮಾ ಸ್ಟಿಲ್
ತೆಲುಗು ಮತ್ತು ಕನ್ನಡ ಸಿನಿಮಾ ನಿರ್ದೇಶನಗಳಲ್ಲಿ ಬ್ಯುಸಿಯಾಗಿರುವ ನಾಗಶೇಖರ್ ಇನ್ನೂ ಕೆಲವೇ ದಿನಗಳಲ್ಲಿ shrikrishna@gmail.com ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ.
ಸದ್ಯ ಸಿನಿಮಾ ಅಂತ್ಯಭಾಗದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ, ಇದು ಅಂತಿಮ ಪ್ಯಾಚ್ ವರ್ಕ್ ಆಗಿದ್ದು, ಇನ್ನೂ ನಾಲ್ಕು ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ ಎಂದು ಹೇಳಿರುವ ನಾಗಶೇಖರ್ ಸಿನಿಮಾದ ಹೊಸ ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಮತ್ತು ಮಲಯಾಳಂ ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ಸಂದೇಶ್ ನಾಗರಾಜ್ ಸಿನಿಮಾ ನಿರ್ಮಿಸುತ್ತಿದ್ದಾರೆ,. ಇದೊಂದು ವಿವಾಹೇತರ ಸಂಬಂಧದ ಕುರಿತ ಕಥೆಯಾಗಿದೆ.
ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ ಸಿನಿಮಾದಲ್ಲಿ ಭಾವನಾ ವಕೀಲೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ದತ್ತಣ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.