ನಾನು ಬಣ್ಣ ಹಚ್ಚೋಕೂ ಸಿದ್ದ, ಲಾಂಗ್ ಹಿಡಿಯೋಕೂ ಸಿದ್ದ: ನಟ ದರ್ಶನ್

ನಾನು ಓದಿದ್ದು ಹತ್ತನೇ ತರಗತಿ, ಕಲಾವಿದನಾಗಿ ನಾನು ಕುರುಕ್ಷೇತ್ರ, ಸಂಗೊಳ್ಳಿ ರಾಯಣ್ಣ, ಮೆಜೆಸ್ಟಿಕ್ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಲಾಂಗ್ ಹಿಡಿಯೋಕೂ ಸಿದ್ದ ಎಂದು ನಟ ದರ್ಶನ್ ಹೇಳಿದ್ದಾರೆ.
ದರ್ಶನ್
ದರ್ಶನ್

ಮೈಸೂರು: ನಾನು ಓದಿದ್ದು ಹತ್ತನೇ ತರಗತಿ, ಕಲಾವಿದನಾಗಿ ನಾನು ಕುರುಕ್ಷೇತ್ರ, ಸಂಗೊಳ್ಳಿ ರಾಯಣ್ಣ, ಮೆಜೆಸ್ಟಿಕ್ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಲಾಂಗ್ ಹಿಡಿಯೋಕೂ ಸಿದ್ದ ಎಂದು ನಟ ದರ್ಶನ್ ಹೇಳಿದ್ದಾರೆ.

ನಿರ್ದೇಶಕರ ಪಟ್ಟ ಕಟ್ಟಿಕೊಂಡಿರುವ ಇಂದ್ರಜಿತ್ ಲಂಕೇಶ್ ಸರಿಯಾಗಿ ಒಂದು ಸಿನಿಮಾ ನಿರ್ದೇಶನ ಮಾಡಿ ತೋರಿಸಲಿ, ಅವರು ಯಾರಿಗೆ ಸಹಾಯಕ ನಿರ್ದೇಶಕರಾಗಿದ್ದರು?  ಕಲಾವಿದರಾಗಲು ನಟ ರಜನಿಕಾಂತ್, ಶಿವರಾಜ್ ಕುಮಾರ್ ಓದಿದ ಶಾಲೆಯಲ್ಲೇ ನಾನು ಓದಿದೆ. ನಾನು ನೀನಾಸಂ ವಿದ್ಯಾರ್ಥಿಯೂ ಹೌದು ಎಂದು ದರ್ಶನ್ ಹೇಳಿದ್ದಾರೆ.

25 ಕೋಟಿ ರೂ. ವಂಚನೆ ಪ್ರಕರಣ, ಹೋಟೆಲ್ ನಲ್ಲಿ ಹಲ್ಲೆ ಹಾಗೂ ಉಮಾಪತಿಯವರ ಆಸ್ತಿ ಕುರಿತಂತಾ ಆರೋಪಗಳಿಗೆ ಉತ್ತರಿಸಲು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ನಟ ದರ್ಶನ್ ಸುದ್ದಿಗಾರರ ಜತೆ ಮಾತನಾಡಿದ್ದಾರೆ.

ಇಂದ್ರಜಿತ್ ಅಪ್ಪನಿಗೇ ಹುಟ್ಟಿದ್ದರೆ....

ಇಂದ್ರಜಿತ್ ಲಂಕೇಶ್ ಕಲಾವಿದರನ್ನು ಅನಕ್ಷರಸ್ಥರೆಂದು ಆರೋಪಿಸಿದ್ದರು.  ಅವರು "ಗಾಂಡುಗಿರಿ" ಎಂದಾಗ ಪತ್ರಕರ್ತರಾರೂ ಪ್ರಶ್ನಿಸಲಿಲ್ಲ. ಅವರು ಅಪ್ಪನಿಗೆ ಹುಟ್ಟಿದ್ದರೆ, ಗಂಡಸೇ ಆಗಿದ್ದರೆ  ಅವರೇ ಬಿಡುಗಡೆ ಮಾಡಿದ ಆಡಿಯೀದಲ್ಲಿ ನನ್ನದೂ ಒಂದು ಮಾತಿದೆ. ಅವನ್ನೂ ರಿಲೀಸ್ ಮಾಡಲಿ ಎಂದು ದರ್ಶನ್ ಇಂದ್ರಜಿತ್ ಲಂಕೇಶ್ ಗೆ ನೇರ ಸವಾಲು ಹಾಕಿದ್ದಾರೆ.

ಉಮಾಪತಿಯಿಂದ ಪ್ರಕರಣಕ್ಕೆ ಟ್ವಿಸ್ಟ್

ಇನ್ನು ಉಮಾಪತಿ ಅವರ ಬಗ್ಗೆ ಮಾತನಾಡಿದ ದರ್ಶನ್ ನಾನು ಮಾಧ್ಯಮದವರೊಂದಿಗೆ ಮಾತನಾಡುವ ವಿಚಾರವನ್ನು ಉಮಾಪತಿಗೆ ಹೇಳುತ್ತಿದ್ದೆ.  ಈಗ ವಿಷಯ ದೊಡ್ಮನೆ ಕಡೆಗೆ ತಿರುಗುತ್ತಿದೆ.ದೊಡ್ಮನೆ ಹಾಗೂ ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ. ಆದರೆ ಪುನೀತ್ ರಾಜ್ ಕುಮಾರ್ ಅವರಿಂದ ಆಸ್ತಿ ಖರೀದಿಸಿದೆ ಎಂದಿದ್ದ ಉಮಾಪತಿ ನನಗೆ ಹಣ ಕೊಡುವುದನ್ನು ಬಾಕಿ ಇರಿಸಿಕೊಂಡಿದ್ದರು. ನನ್ನ ಹಣಕ್ಕೆ ಜಮಾ ಮಾಡಿಕೊಂಡು ಆ ಆಸ್ತಿಯನ್ನು ನೊಂದಣಿ ಮಾಡಿಕೊಡುವಂತೆ ಕೇಳಿಕೊಂಡೆ.  ಇದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿದೆ ಎಂದರು.

ನೂರು ವರ್ಷವಾದರೂ ದೊಡ್ಮನೆ ಎಂದೂ ದೊಡ್ಮನೆಯೇ...

ಪೂರ್ಣಿಮಾ ಎಂಟರ್ಪ್ರೈಸಸ್ ಅಡಿ ನಿರ್ಮಾಣವಾದ "ಜನುಮದ ಜೋಡಿ: ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿ  ಕೆಲಸ ಮಾಡಿದ್ದೆ ಅಂದಿನ ನನ್ನ ಸಂಭಾವನೆ 175 ರೂ. ನನ್ನ ತಂದೆ ಸಹ ಅಣ್ಣಾವ್ರ ಮನೆಯಿಂದಲೇ ವೃತ್ತಿ ಬದುಕು ಪ್ರಾರಂಭಿಸಿದ್ದರು. ಹಾಗಾಗಿ ನಾನು ಡಾ. ರಾಜ್ ಕುಟುಂಬವನ್ನೆಂದೂ ಮರೆಯಲ್ಲ ಎಂದು ದರ್ಶನ್ ಹೇಳಿದ್ದಾರೆ.

ನನಗೆ ನನ್ನ ತಂದೆ ಯಾವುದನ್ನೂ ಹೇಳಿಕೊಡಲಿಲ್ಲ, ಹಾಗೆ ಹೇಳಿಕೊಡುವ ಮುನ್ನವೇ ಕಣ್ಮರೆಯಾಗಿದ್ದರು. ಒಂದೊಮ್ಮೆ ಅವರಿದ್ದಿದ್ದರೆ ನಾನು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದ್ದೆನೇನೋ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

ನಾಣು ಯಾವ ತಪ್ಪೂ ಮಾಡಿಲ್ಲ, ಕ್ಷಮೆ ಕೇಳಲ್ಲ

ನಾನು ಯಾವ ತಪ್ಪೂ ಮಾಡಿಲ್ಲ ಹಾಗಾಗಿ ಯಾರ ಬಳಿಯೂ ಕ್ಷಮೆ ಕೇಳಲ್ಲ  ಮೈಸೂರಿನ ಹೋಟೆಲ್ ಸಂದೇಶ್ ದಿ ಪ್ರಿನ್ಸ್ ಸಿಬ್ಬಂದಿ ಮೇಲೆ ಹಲ್ಲೆ ಎನ್ನಲಾದ ಪ್ರಕರಣದ ಬಗ್ಗೆ ಮಾತನಾಡಿದ ನಟ ನಾನು ಹಲ್ಲೆ ಮಾಡಿದ್ದೇ ಆದಲ್ಲಿ ವೈದ್ಯಕೀಯ ವರದಿ ಬರುತ್ತಿತ್ತು.ನನ್ನ ವಿರುದ್ಧ ದೂರು ನೀಡುತ್ತಿದ್ದರು. ಆದರೆ ಹಾಗೇನೂ ಆಗಿಲ್ಲ, ಇದೆಲ್ಲಾ ಕೇವಲ ಷಡ್ಯಂತ್ರ, ಹಿತಶತ್ರು, ಬಹಿರಂಗ, ಅಂತರಂಗದ ಶತ್ರುಗಳನ್ನು ಪತ್ತೆ ಹಚ್ಚಲು ನಾನಿಂದು ಮುಕ್ತವಾಗಿ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com