ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸೆಟ್ ಗೆ ಶೈನ್ ಶೆಟ್ಟಿ, ತಿಲಕ್ ಮತ್ತು ಚಿಕ್ಕಣ್ಣ ಎಂಟ್ರಿ!
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಶೂಟಿಂಗ್ ಲಾಕ್‌ಡೌನ್ ಮುಗಿದ ನಂತರ ಪುನರಾರಂಭವಾಗಿದೆ. ಸ್ಟಂಟ್ ಸಹೋದರರಾದ ರಾಮ್-ಲಕ್ಷ್ಮಣ್ ಅವರ ನೃತ್ಯ ಸಂಯೋಜನೆಯ ಫೈಟ್ ಸೀಕ್ವೆನ್ಸ್ ಪೂರ್ಣಗೊಳಿಸಿದ ನಿರ್ದೇಶಕ ಚೇತನ್ ಕುಮಾರ್ ಈಗ ಟಾಕಿ ಭಾಗಗಳ ಚಿತ್ರೀಕರಣದಲ್ಲಿದ್ದಾರೆ.
Published: 19th July 2021 11:14 AM | Last Updated: 19th July 2021 01:41 PM | A+A A-

ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಶೂಟಿಂಗ್ ಲಾಕ್‌ಡೌನ್ ಮುಗಿದ ನಂತರ ಪುನರಾರಂಭವಾಗಿದೆ. ಸ್ಟಂಟ್ ಸಹೋದರರಾದ ರಾಮ್-ಲಕ್ಷ್ಮಣ್ ಅವರ ನೃತ್ಯ ಸಂಯೋಜನೆಯ ಫೈಟ್ ಸೀಕ್ವೆನ್ಸ್ ಪೂರ್ಣಗೊಳಿಸಿದ ನಿರ್ದೇಶಕ ಚೇತನ್ ಕುಮಾರ್ ಈಗ ಟಾಕಿ ಭಾಗಗಳ ಚಿತ್ರೀಕರಣದಲ್ಲಿದ್ದಾರೆ.
ಚಿತ್ರದ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಬಿಗ್ ಬಾಸ್ 7 ವಿಜೇತ ಶೈನ್ ಶೆಟ್ಟಿ, ಉಗ್ರಂ ಖ್ಯಾತಿಯ ತಿಲಕ್, ಮತ್ತು ಚಿಕ್ಕಣ್ಣ ಚಿತ್ರದ ಸೆಟ್ ಪ್ರವೇಶಿಸಿದ್ದಾರೆ. ಇದರಲ್ಲಿ ಈಗಾಗಲೇ ಪ್ರಿಯಾ ಆನಂದ್, ಮೆಕಾ ಶ್ರೀಕಾಂತ್, ಮುಖೇಶ್ ರಿಷಿ ಮುಂತಾದವರು ಪಾತ್ರವಹಿಸಿದ್ದಾರೆ. ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು, ಹರ್ಷ, ಸುಚೇಂದ್ರ ಪ್ರಸಾದ್, ಮತ್ತು ರವಿಶಂಕರ್ ಗೌಡ. ಸಹ ಇದ್ದಾರೆ.
ಕಿಶೋರ್ ಪಾತಿಕೊಂಡ ಬಂಡವಾಳ ಹೂಡಿದ ಈ ಚಿತ್ರವು ಸಂಗೀತ ನಿರ್ದೇಶಕ ಚರಣ್ ಅವರೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ಆಗಿದೆ. ಡಿಒಪಿ ಜೆ ಸ್ವಾಮಿ ಜೇಮ್ಸ್ ಅವರ ಛಾಯಾಗ್ರಹಣ ಇದಕ್ಕಿದೆ.
ಈ ಸಿನಿಮಾ ನಂತರ ಪುನೀತ್ "ದ್ವಿತ್ವ"ಚಿತ್ರೀಕರಣ ಪ್ರಾರಂಭಿಸಲಿದ್ದು, ಇದು ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ನಟ ಜತೆಯಾಗುವುದಕ್ಕೆ ಸಾಕ್ಷಿಯಾಗಲಿದೆ.. ಈ ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದೆ.