'ಇಕ್ಕಟ್' ಒಂದು ವಿಶಿಷ್ಟ ಲಾಕ್‌ಡೌನ್ ಸಿನೆಮಾ

ನಟ ನಾಗಭೂಷಣ ಪಾಲಿಗೆ "ಇಕ್ಕಟ್" ಎರಡು ಕಾರಣಗಳಿಗಾಗಿ ವಿಶೇಷವೆನಿಸಿದೆ. ಒಂದು ಆತ ಕಲಾವಿದನಾಗಿ ಜನರ ರಂಜಿಸಿದ ನಟನೀಗ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆಮಾಡಲಿದ್ದಾರೆ. ಎರಡನೆಯದಾಗಿ ಈ ಚಿತ್ರವು ಅವರ ಮೊದಲ ಒಟಿಟಿ ಬಿಡುಗಡೆಯನ್ನು ಸಹ ಕಾಣಲಿದೆ. 
ಇಕ್ಕಟ್ ಚಿತ್ರದ ದೃಶ್ಯ
ಇಕ್ಕಟ್ ಚಿತ್ರದ ದೃಶ್ಯ
Updated on

ನಟ ನಾಗಭೂಷಣ ಪಾಲಿಗೆ "ಇಕ್ಕಟ್" ಎರಡು ಕಾರಣಗಳಿಗಾಗಿ ವಿಶೇಷವೆನಿಸಿದೆ. ಒಂದು ಆತ ಕಲಾವಿದನಾಗಿ ಜನರ ರಂಜಿಸಿದ ನಟನೀಗ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆಮಾಡಲಿದ್ದಾರೆ. ಎರಡನೆಯದಾಗಿ ಈ ಚಿತ್ರವು ಅವರ ಮೊದಲ ಒಟಿಟಿ ಬಿಡುಗಡೆಯನ್ನು ಸಹ ಕಾಣಲಿದೆ. ಲಾಕ್‌ಡೌನ್‌ನ ಮಧ್ಯದಲ್ಲಿಯೇ ಸಿದ್ಧವಾಗಿರುವ ಕಾಮಿಡಿ ಡ್ರಾಮಾ ಜುಲೈ 21 ರಂದು ಭಾರತ ಮತ್ತು 240 ದೇಶಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಈ ಚಿತ್ರವನ್ನು ಪವನ್ ಕುಮಾರ್ ಸ್ಟುಡಿಯೋಸ್ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ನಿರ್ಮಿಸಿದ್ದು ಈಶಮ್ ಹಾಗೂ ಹಸೀನ್ ಖಾನ್ ಜೋಡಿ ನಿರ್ದೇಶಿಸಿದ್ದಾರೆ. ಇಕ್ಕಟ್ ಕೆಲವು ದೊಡ್ಡ ಹಾಸ್ಯದಿಂದ ತುಂಬಿದ ರೋಲರ್-ಕೋಸ್ಟರ್ ರೈಡ್ ಆಗಿರಲಿದೆ ಎಂದು ಸಿನಿ ಎಕ್ಸ್ ಪ್ರೆಸ್ ಜತೆಗಿನ ಸಂದರ್ಶನದಲ್ಲಿ ಪ್ರಮುಖ ನಟರಾದ ನಾಗಭೂಷಣ ಮತ್ತು ಭೂಮಿ ಶೆಟ್ಟಿ ಹೇಳುತ್ತಾರೆ.

ನಾಗಾಭೂಷಣ ಕೆಲಸಗಳ ಹುಡುಕಾತದಲ್ಲಿದ್ದಾಗ ಲಾಕ್‌ಡೌನ್ ಸಮಯದಲ್ಲಿ ಈ ಯೋಜನೆಯು ಬಂದಿತು. “ಪ್ರಾಸಂಗಿಕವಾಗಿ, ಕಥೆಯು ಲಾಕ್‌ಡೌನ್ ಸುತ್ತ ಸುತ್ತುತ್ತದೆ, ನಾವು ನಿರಾಶೆ ಹೊಂದಿದ್ದೇವೆ. ಚಿತ್ರವು ಸಾಂಕ್ರಾಮಿಕದಂತಹ ಸೂಕ್ಷ್ಮ ವಿಷಯದ ಬಗ್ಗೆ ಇದ್ದರೂ, ಅದರೊಂದಿಗೆ ಹಾಸ್ಯದ ಘಮವನ್ನೂ ತಂದಿದೆ.ದು ರೋಮಾಂಚನಕಾರಿ ಎಂದು ನಾನು ಭಾವಿಸುತ್ತೇನೆ" ಎಂದು ನಾಗಭೂಷಣ ಹೇಳುತ್ತಾರೆ.

“ಈ ಚಿತ್ರವು ಅತೃಪ್ತರಾದ ದಂಪತಿಗಳು ವಿಚ್ಚೇದನಕ್ಕೆ ಯೋಜಿಸುವ ಕಥೆಯನ್ನು ಅನುಸರಿಸುತ್ತದೆ. ಆದಾಗ್ಯೂ ಲಾಕ್‌ಡೌನ್ ಪರಸ್ಪರ ಸಮಯ ಕಳೆಯಲು ಅವರನ್ನು ಒತ್ತಾಯಿಸುತ್ತದೆ. ಈ ಪಾತ್ರವನ್ನು ಸ್ವೀಕರಿಸಲು ನನಗೆ ಒಂದೇ ಸಾಲಿನ ಕಥೆ ಸಾಕಾಗಿತ್ತು".

ಇಕ್ಕಟ್ ಎಂದರೆ ದಟ್ಟಣೆ ಅಥವಾ ಬಿಗಿಯಾದ ಪರಿಸ್ಥಿತಿ. “ಇಡೀ ಶೂಟಿಂಗ್ ಅನುಭವ ಹೀಗಿತ್ತು. ಇಡೀ ಚಿತ್ರೀಕರಣವು 20x30 ಜಾಗದವ ಮನೆಯಲ್ಲಿ ನಡೆದಿದೆ" ಎಂದು ಅವರು ಹೇಳಿದರು.

ಟಿವಿಯಿಂದ ದೊಡ್ಡ ಪರದೆಯತ್ತ ಸಾಗುತ್ತಿರುವ ಭೂಮಿ ಶೆಟ್ಟಿ, “ಇಡೀ ಇಕ್ಕಟ್ ಚಿತ್ರದ ಕಥೆಯು  2020 ರಲ್ಲಿ ನಾವು ಹೊಂದಿದ್ದ ಮೊದಲ ಲಾಕ್‌ಡೌನ್ ಸಮಯದ ಆಧಾರಿತವಾಗಿದೆ. ಅದು ನನಗೆ ಸಂಪೂರ್ಣ ಹೊಸ ಅನುಭವವಾಗಿತ್ತು. ಒಂದು ಕಡೆ, ಸಾಂಕ್ರಾಮಿಕ ರೋಗದ ಈ ಭಯವಿತ್ತು. ಮತ್ತೊಂದೆಡೆ, ಸಿನಿಮಾಗಾಗಿ ಕೆಲಸ ಮಾಡುವ ಉತ್ಸಾಹ. ಈ ಚಿತ್ರವನ್ನು 17 ದಿನಗಳಲ್ಲಿ ಚಿತ್ರೀಕರಿಸಲಾಯಿತು, ಮತ್ತು ಸೆಟ್‌ಗಳಿಗೆ ಬರುವ ಪ್ರತಿಯೊಬ್ಬರೂ ನಿಶ್ಚಿತ ದಿನಚರಿಯನ್ನು ಹೊಂದಿದ್ದರು - ಮಾಸ್ಕ್ ತೆಗೆದಿಡುವುದು, ಸ್ವಚ್ಚಗೊಳಿಸುವುದು, ಕಶಾಯ ಕುಡಿಯುವುದುಮತ್ತು ಚಿತ್ರೀಕರಣ. ಈ ಇಡೀ ಯೋಜನೆಯು ಅಪಾರ್ಟ್ಮೆಂಟ್ ನಲ್ಲಿ  ನಡೆಯುತ್ತಿರುವುದರಿಂದ, ಆ ಸಮಯದಲ್ಲಿ ನಮ್ಮ ಚಿತ್ರೀಕರಣದ ಬಗ್ಗೆ ನೆರೆಹೊರೆಯವರು ಸ್ವಲ್ಪ ಸಂಶಯ ವ್ಯಕ್ತಪಡಿಸಿದರು.

“ಎಲ್ಲಾ ವಿವಾಹಿತ ದಂಪತಿಗಳು ಇಕ್ಕಟ್ ನೊಂದಿಗೆ ಸಂಬಂಧ ಕಾಣಬಹುದು. ಆದರೆ ಅವರು ಚಲನಚಿತ್ರದಿಂದ ಏನನ್ನು ತೆಗೆದುಕೊಳ್ಳುತ್ತಾರೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಇನ್ನೂ ಮದುವೆಯಾಗಿಲ್ಲ. ಅಂತಹ ಪಾತ್ರವನ್ನು ಮಾಡಿದ ನಂತರ, ದಂಪತಿಗಳ ನಡುವಿನ ಪರಸ್ಪರ ಗೌರವವು ಮದುವೆ ಎಂಬುದರ ಅರ್ಥ ಎಂದು ನು ಹೇಳುತ್ತೇನೆ” ಎಂದು ಭೂಮಿ ಹೇಳುತ್ತಾರೆ.

ಲಾಕ್‌ಡೌನ್ ನಲ್ಲಿ ಜನ ಎರಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ - ಸಾಂಕ್ರಾಮಿಕ ಸಂಬಂಧಿತ ಮಾನಸಿಕ ಒತ್ತಡ. ಹಾಗೂ ಅನೇಕ ದಿನಗಳವರೆಗೆ ಯಾರೊಂದಿಗಾದರೂ ಸಮಯ ಕಳೆಯಲು ಜನರನ್ನು ಒತ್ತಾಯಪೂರ್ವಕ ಸ್ಥಿತಿ.  ನೀವು ಇತರ ವ್ಯಕ್ತಿಯನ್ನು ಇಷ್ಟಪಟ್ಟರೂ ಸಹ, 24/7 ಯಾರೊಂದಿಗಾದರೂ ಇರುವುದು ಕಷ್ಟ. ಇಕ್ಕಟ್ ಅಂತಹ ಮಾನವ ತೊಡಕುಗಳನ್ನು ಚೆನ್ನಾಗಿ ಪರಿಶೋಧಿಸಿದೆ" ನಾಗಭೂಷಣ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com