ಸೂರಿ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಗಾಗಿ ಪ್ರಿಯಾಂಕಾ ಕುಮಾರ್ ಸಿದ್ಧ!

16 ವರ್ಷಕ್ಕೆ ರ್ಯಾಂಪ್ ಮೇಲೆ ನಡಿಗೆ ಆರಂಭಿಸಿ ಯಶಸ್ವು ಕಂಡ ಪ್ರಿಯಾಂಕಾ ಕುಮಾರ್ ನಟನಾ ವೃತ್ತಿಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

Published: 22nd July 2021 12:12 PM  |   Last Updated: 22nd July 2021 01:01 PM   |  A+A-


Priyanka Kumar

ಪ್ರಿಯಾಂಕಾ ಕುಮಾರ್

Posted By : Shilpa D
Source : The New Indian Express

16 ವರ್ಷಕ್ಕೆ ರ್ಯಾಂಪ್ ಮೇಲೆ ನಡಿಗೆ ಆರಂಭಿಸಿ ಯಶಸ್ವು ಕಂಡ ಪ್ರಿಯಾಂಕಾ ಕುಮಾರ್ ನಟನಾ ವೃತ್ತಿಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

ಸೂರಿ ನಿರ್ದೇಶನ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ಜೊತೆ ನಟಿಸುವ ಮೂಲಕ ಪ್ರಿಯಾಂಕಾ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. 

ಆಗಸ್ಟ್ ನಲ್ಲಿ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಆರಂಭವಾಗಲಿದ್ದು ಪ್ರಿಯಾಂಕಾ ತಮ್ಮ ಭಾಗದ ಶೂಟಿಂಗ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.  ನಾನು ಶೂಟಿಂಗ್ ಗೆ ಬಾಗವಹಿಸಿದ ಮರು ದಿನವೇ ಲಾಕ್ ಡೌನ್ ಘೋಷಣೆಯಾಯಿತು. ಹಾಗಾಗಿ ನಾನು ಪೂರ್ಣ ಪ್ರಮಾಣದ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರಿಯಾಂಕಾ ಕುಮಾರ್ ತಿಳಿಸಿದ್ದಾರೆ.

ಸೂರಿ ಅವರ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಆಯ್ಕೆಯಾದ ವಿಷಯ ಕೇಳಿ ನನಗೆ ಶಾಕ್ ಜೊತೆಗೆ ಅಚ್ಚರಿ ಕೂಡ ಆಯಿತು.  ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ.

ನನ್ನ ರಿಹರ್ಸಲ್ ಆತ್ಮ ವಿಶ್ವಾಸ ಹೆಚ್ಚಿಸಿದೆ,  ನಾನು ಕಲಿತಿರುವುದನ್ನೆಲ್ಲಾ ಒರೆಗೆ ಹಚ್ಚಲು ಇದೊಂದು ಸದವಕಾಶ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಸೂರಿ ನಿರ್ದೇಶನದ ವೈಖರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ , ಸೂರಿ ಅವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ, ಅವರ ಮುಂದಿನ ನಡೆ ಏನು ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ. ಏಕೆಂದರೇ ಪ್ರತಿಯೊಂದು ಕೆಲಸ ಸ್ಥಳದಲ್ಲೆ ನಿರ್ಧಾರವಾಗುತ್ತದೆ, ನೈಜವಾದ ನಿರ್ದೇಶನ ಪ್ರಮುಖ ಅಂಶವಾಗಿದೆ ಎಂದು ಪ್ರಿಯಾಂಕಾ ವಿವರಿಸಿದ್ದಾರೆ.

ಇದರ ಜೊತೆಗೆ ಇನ್ನೂ ಕೆಲವು ಪ್ರಾಜೆಕ್ಟ್ ಗಳ ಚರ್ಚೆ ನಡೆದಿದ್ದು, ಸಹಿ ಮಾಡಿದ ನಂತರವೇ ಅದನ್ನು ಖಚಿತಪಡಿಸುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ. ಕಥೆ ಓದುವುದರ ಜೊತೆಗೆ ಯೋಗ ಮತ್ತು ಡ್ರಾಯಿಂಗ್ ಪ್ರಿಯಾಂಕಾ ಅವರ ಪ್ರಮುಖ ಹವ್ಯಾಸವಾಗಿದೆ.


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp