ಯೋಗರಾಜ್ ಭಟ್ ನಿರ್ದೇಶನದ ಮುಂದಿನ ಸಿನಿಮಾ 'ಪುಂಡಲೀಕ' ದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರ
ಗಾಳಿಪಟ-2 ಸಿನಿಮಾ ನಂತರ ನಿರ್ದೇಶಕ ಯೋಗರಾಜ್ ಭಟ್ ಕೆಲವೊಂದು ಆಸಕ್ತಿದಾಯಕ ಚಿತ್ರಗಳನ್ನು ಕೈಗತ್ತಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಅನಂತ್ ನಾಗ್ ಜೊತೆ ತಮ್ಮ ಮುಂದಿನ ಸಿನಿಮಾ ಮಾಡುತ್ತಿದ್ದಾರೆ.
Published: 28th July 2021 01:36 PM | Last Updated: 28th July 2021 01:36 PM | A+A A-

ಅನಂತ್ ನಾಗ್
ಗಾಳಿಪಟ-2 ಸಿನಿಮಾ ನಂತರ ನಿರ್ದೇಶಕ ಯೋಗರಾಜ್ ಭಟ್ ಕೆಲವೊಂದು ಆಸಕ್ತಿದಾಯಕ ಚಿತ್ರಗಳನ್ನು ಕೈಗತ್ತಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಅನಂತ್ ನಾಗ್ ಜೊತೆ ತಮ್ಮ ಮುಂದಿನ ಸಿನಿಮಾ ಮಾಡುತ್ತಿದ್ದಾರೆ.
ಪುಂಡಲೀಕ ಎಂಬ ಟೈಟಲ್ ನಲ್ಲಿ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ತಮ್ಮ ಹೊಸ ಸಿನಿಮಾಗೆ ಹೊಸ ನಿರ್ಮಾಪಕ ಬಳಿ ಚರ್ಚಿಸಿದ್ದಾರೆ.
ಇದೊಂದು ಆಸಕ್ತಿದಾಯಕ ಸಿನಿಮಾವಾಗಿದೆ. ಶೀಘ್ರದಲ್ಲೇ ಸಿನಿಮಾದ ನಾಯಕ ಮತ್ತು ಉಳಿದ ಕಲಾವಿದರ ಬಗ್ಗೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾದಲ್ಲಿ ಅನಂತ್ ನಾಗ್ ಅವರ ಜೊತೆ ಕೆಲಸ ಮಾಡಿದ್ದೆ, ಅವರಂಥ ಅಪರೂಪದ ಪ್ರತಿಭೆಯನ್ನು ನಾನು ಕಂಡಿಲ್ಲ, ನಮ್ಮಂತಹ ನಿರ್ದೇಶಕರು ಅವರೊಂದಿಗೆ ಕೆಲಸ ಮಾಡಲು
ಬಯಸುವಂತೆ ಮಾಡುವ ಸಾಕಷ್ಟು ಗುಣಗಳು ಅನಂತ್ ನಾಗ್ ಅವರಲ್ಲಿವೆ. ಅವರ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ.
ಯೋಗರಾಜ್ ಭಟ್ ಸದ್ಯ ಗಾಳಿಪಟ2 ಸಿನಿಮಾ ಎಡಿಟಿಂಗ್ ಕೆಲಸದಲ್ಲಿ ಮಗ್ನರಾಗಿದ್ದಾರೆ. ಶೀಘ್ರವೇ ಗಾಳಿಪಟ 2 ಸಿನಿಮಾ ಚಿತ್ರೀಕರಣ ಪುನಾರಂಭಿಸಲು ಯೋಜಿಸಿದ್ದಾರೆ. ರಮೇಶ್ ರೆಡ್ಡಿ ಬ್ಯಾಂಕ್ರೊಲ್ ಮಾಡಿದ ಈ ಚಿತ್ರದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. "ಅನಂತ್ ನಾಗ್ ಸರ್ ಈ ಚಿತ್ರದಲ್ಲಿ ಕನ್ನಡ ಶಿಕ್ಷಕರಾಗಿ ನಟಿಸುತ್ತಿದ್ದಾರೆ, ಮತ್ತು ಎಡಿಟಿಂಗ್ ಟೇಬಲ್‌ನಲ್ಲಿ ಅವರ ಅಭಿನಯವನ್ನು ನೋಡುವುದು ಒಂದು ಆನಂದದಾಯಕ ಅನುಭವವಾಗಿದೆ" ಎಂದು ಯೋಗರಾಜ್ ಭಟ್ ಹೇಳುತ್ತಾರೆ, ಗಾಳಿಪಟ 2 ಸಿನಿಮಾ ದ್ವಿತೀಯಾರ್ಧದಲ್ಲಿ ಅನಂತ್ ನಾಗ್ ಪಾತ್ರವು ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಕನ್ನಡ ಚಿತ್ರೋದ್ಯಮದಲ್ಲಿ ಅಭಿಯಾನ ಆರಂಭಿಸಲಾಗಿದೆ.