ಕೋವಿಡ್ 19: ಖ್ಯಾತ ಗಾಯಕ ಜಿ. ಆನಂದ್ ಸಾವು

ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ.
ಗಾಯಕ ಜಿ ಆನಂದ್
ಗಾಯಕ ಜಿ ಆನಂದ್

ಹೈದರಾಬಾದ್:  ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ 67 ವರ್ಷದ ತೆಲುಗಿನ ಖ್ಯಾತ ಗಾಯಕ ಆನಂದ್ ಅವರ ಆಕ್ಸಿಜನ್ ಪ್ರಮಾಣ 55ಕ್ಕೆ ಇಳಿಕೆಯಾಗಿತ್ತು. ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಪರದಾಡಿದ್ದರಾದರೂ ಸಿಗದ ಕಾರಣ ಆಂಧ್ರಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಆಕ್ಸಿಜನ್ ಹಾಗೂ ವೆಂಟಿಲೇಟರ್ ಗಾಗಿ ಅವರ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಆರ್.ಆರ್.ಆರ್. ಸಿನಿಮಾ ನಿರ್ಮಾಪಕ ಹಾಗೂ  ಮೈತ್ರಿ ಮೂವೀಸ್ ಗೆ ಮನವಿ ಮಾಡಿಕೊಂಡಿದ್ದರು. ವೆಂಟಿಲೇಟರ್ ಸಿಗುವಷ್ಟರಲ್ಲೇ ಆನಂದ್ ಕೊನೆಯುಸಿರೆಳೆದಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯವರಾಗಿದ್ದ ಆನಂದ್ 1976 ರಲ್ಲಿ ಅಮೇರಿಕಾ ಅಮ್ಮಾಯಿ ಚಲನಚಿತ್ರದೊಂದಿಗೆ ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು, ಚಿತ್ರದಲ್ಲಿ, ಅವರು "ಓಕಾ ವೇನು ವಿನಿಪಿಂಚೆನು" ಎಂಬ ಹಿಟ್ ಹಾಡಿಗೆ ಧ್ವನಿ ನೀಡಿದರು.

"ವಿಠಲ ವಿಠಲ ಪಾಂಡುರಂಗ ವಿಠಲ", "ದಿಕುಲು ಚುಡಾಕು ರಾಮಯ್ಯ" ಸೇರಿದಂತೆ ನೂರಾರು ಹಿಟ್ ಹಾಡುಗಳು ಇವರ ಹಿನ್ನೆಲೆ ಗಾಯನದಲ್ಲಿ ಮೂಡಿಬಂದಿತ್ತು.

ಜಿ ಆನಂದ್ ಸ್ವರ ಮಾಧುರಿ ಎಂಬ ಸಂಗೀತ ತಂಡವನ್ನು ಸ್ಥಾಪಿಸಿದರು, ಇದು ವಿಶ್ವದಾದ್ಯಂತ ಪ್ರದರ್ಶನ ನೀಡಿದೆ.

ಆನಂದ್ ನಿಧನಕ್ಕೆ ತೆಲುಗು ಸೂರಪ್ ಸ್ಟಾರ್ ಚಿರಂಜೀವಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com