ಶಶಿಕಾಂತ್ ಆನೇಕಲ್ ನಿರ್ದೇಶನದ 'ಖಲಾಸ್' ಸಿನಿಮಾದಲ್ಲಿ ಆಯೇಷಾ
ಬಿಎಸ್‌ಆರ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಬೋಯಪತಿ ಸುಬ್ಬಾ ರಾವ್ ನಿರ್ಮಿಸಿರುವ ರಾಜಕೀಯ ಕಥೆಯುಳ್ಳ ಸಿನಿಮಾಗೆ ಖಲಾಸ್ ಎಂದು ಟೈಟಲ್ ಇಡಲಾಗಿದ್ದು, ಆಯೇಷಾ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ನಿರ್ವಹಿಸಲಿದ್ದಾರೆ.
Published: 02nd November 2021 11:59 AM | Last Updated: 02nd November 2021 12:10 PM | A+A A-

ಆಯೇಷಾ
ಶಶಿಕಾಂತ್ ಆನೇಕಲ್ ನಿರ್ದೇಶನದ ಖಲಾಸ್” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ಬಿಎಸ್‌ಆರ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಬೋಯಪತಿ ಸುಬ್ಬಾ ರಾವ್ ನಿರ್ಮಿಸಿರುವ ರಾಜಕೀಯ ಕಥೆಯುಳ್ಳ ಸಿನಿಮಾಗೆ ಖಲಾಸ್ ಎಂದು ಟೈಟಲ್ ಇಡಲಾಗಿದ್ದು, ಆಯೇಷಾ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ನಿರ್ವಹಿಸಲಿದ್ದಾರೆ.
ನಟಿ ಆಯೇಷಾ ಈ ಹಿಂದೆ ಜನ ಗಣ ಮನ ಸಿನಿಮಾ ಭಾಗವಾಗಿದ್ದರು. ತಂಡವು ಇತ್ತೀಚೆಗೆ ಸರಳ ಮುಹೂರ್ತದೊಂದಿ ಸಿನಿಮಾ ಪ್ರಾರಂಭಿಸಿತು. ಆದರೆ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ನಂತರ ಚಿತ್ರೀಕರಣ ಸ್ಥಗಿತಗೊಂಡಿತ್ತು.
ನವೆಂಬರ್ 4 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ, ತೆಲುಗಿನ ಖ್ಯಾತ ನಟ ಸುಮನ್, ಉಮೇಶ್ ಬಣಕಾರ್, ಕುರಿ ರಂಗ ಹಾಗೂ ಅತಿಥಿಪಾತ್ರದಲ್ಲಿ ರವಿಕಾಳೆ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.