
ಸುನಿ ನಿರ್ದೇಶಿಸಿ ಶರಣ್ ನಟಿಸಿರುವ ಅವತಾರ ಪುರುಷ ಸಿನಿಮಾ ಥಿಯೇಟರ್ ಗಳಿಗೆ ಲಗ್ಗೆಯಿಡಲು ಸಿದ್ಧವಾಗಿದೆ.
ಅವತಾರ ಪುರುಷ ಸಿನಿಮಾದಲ್ಲಿ ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು ಡಿಸೆಂಬರ್ 10 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.
ಇನ್ನೂ ದೊಡ್ಡ ದೊಡ್ಡ ನಟರ ದಂಡೆ ಈ ಚಿತ್ರದಲ್ಲಿದೆ. ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಹಲವಾರು ಕಲಾವಿದರು ಅವತಾರ ಪುರುಷನಿಗೆ ಸಾಥ್ ಕೊಡಲಿದ್ದಾರೆ.
ಇದನ್ನೂ ಓದಿ: 'ಅವತಾರ ಪುರುಷ' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ
'ಅವತಾರ ಪುರುಷ 1' ಮತ್ತು 'ಅವತಾರ ಪುರುಷ 2' ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್ ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ.
ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ' ಚಿತ್ರ ಮೂಡಿ ಬಂದಿದೆ.
Advertisement