
ಬೆಂಗಳೂರು: ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈಗ ಸಂಭ್ರಮದ ಸಮಯ. ಅವರ ಎರಡು ಬಿಗ್ ಬಜೆಟ್ ನ ಸಿನಿಮಾಗಳಾದ ತೆಲುಗಿನ ಪುಷ್ಪ ಮತ್ತು ಬಾಲಿವುಡ್ ನ ಚೊಚ್ಚಲ ಚಿತ್ರ ಮಿಷನ್ ಮಜ್ನು ಬಿಡುಗಡೆಗೆ ಸಜ್ಜಾಗಿದೆ.
ಅತ್ಯಲ್ಪ ಸಮಯದಲ್ಲಿ ಕನ್ನಡದ ನಟಿಯೊಬ್ಬರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಅಪರೂಪ. ಅಂತವರ ಸಾಲಿಗೆ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ, ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕೂಡ ಲಗ್ಗೆಯಿಟ್ಟಿದ್ದು ಹಳೆ ಸುದ್ದಿ.
ಅಲ್ಲು ಅರ್ಜುನ್ ನಾಯಕನಾಗಿರುವ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಾಯಕಿ. ತೆಲುಗು ಚಿತ್ರರಂಗದಲ್ಲಿ ನಿರೀಕ್ಷಿತ ಚಿತ್ರವಾಗಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ನಲ್ಲಿ ರಶ್ಮಿಕಾ ಗೆಟಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಚಿತ್ರ ಡಿಸೆಂಬರ್ 25ರಂದು ತೆರೆಗೆ ಬರಲಿದೆ.
'ಮಿಷನ್ ಮಜ್ನು', ಸ್ಪೈ ಥ್ರಿಲ್ಲರ್ ಸಿನಿಮಾವಾಗಿದ್ದು, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಎದುರು ರಶ್ಮಿಕಾ ಅಭಿನಯಿಸಿದ್ದಾರೆ. ಚಿತ್ರ ಮೇ 13, 2022 ರಂದು ಬಿಡುಗಡೆಯಾಗಲಿದೆ. ಈ ಎರಡೂ ಚಿತ್ರಗಳ ಮೇಲೆ ರಶ್ಮಿಕಾ ಮಂದಣ್ಣ ಮತ್ತು ಅವರ ಅಭಿಮಾನಿಗಳು ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
Advertisement