ಸಮಾಧಿ ಬಳಿ ಪುನೀತ್ ಪುಣ್ಯ ಸ್ಮರಣೆ: ನಟ ವಿನೋದ್ ರಾಜ್ ರಿಂದ ಅಪ್ಪುಗೆ ಪಿಂಡ ಪ್ರದಾನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಣ್ಣೀರು ಹಾಕದವರೇ ಇಲ್ಲ. ಹೀಗಿರುವಾಗಿ ಇತರರ ಸಂಕಷ್ಟಕ್ಕೆ ಮಿಡಿಯುವ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಸ್ಪಂದಿಸದೇ ಇರಲು ಸಾಧ್ಯವೇ?
Published: 08th November 2021 08:19 PM | Last Updated: 08th November 2021 08:19 PM | A+A A-

ಅಪ್ಪುಗೆ ಪಿಂಡ ಪ್ರದಾನ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಣ್ಣೀರು ಹಾಕದವರೇ ಇಲ್ಲ. ಹೀಗಿರುವಾಗಿ ಇತರರ ಸಂಕಷ್ಟಕ್ಕೆ ಮಿಡಿಯುವ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಸ್ಪಂದಿಸದೇ ಇರಲು ಸಾಧ್ಯವೇ?
ಹೌದು. ಅಪ್ಪು ಇಹಲೋಕ ತ್ಯಜಿಸಿ 11ನೇ ದಿನವಾದ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಪುಣ್ಯ ಸ್ಮರಣೆ, ಪೂಜೆ ಮತ್ತಿತರ ವಿಧಿವಿಧಾನಗಳು ನಡೆದರೆ, ಮತ್ತೊಂದೆಡೆ ನಟ ವಿನೋದ್ ರಾಜ್ ತಾಯಿ ಲೀಲಾವತಿಯೊಡಗೂಡಿ ಶ್ರೀರಂಗಪಟ್ಟಣದ ಕಾವೇರಿ ತಟದ ಸಂಗಮದಲ್ಲಿ ಪುನೀತ್ ಗೆ ಪಿಂಡ ಪ್ರದಾನ ಮಾಡಿದ್ದಾರೆ.
ಇದನ್ನು ಓದಿ: ಅಪ್ಪು ಪುಣ್ಯ ಸ್ಮರಣೆ: ನಾಳೆ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ
ಸ್ಥಳೀಯ ವೈದಿಕರ ನೇತೃತ್ವದಲ್ಲಿ ವೈದಿಕ ಕ್ರಿಯೆಗಳನ್ನು ನೆರವೇರಿಸಿ ಆತ್ಮಕ್ಕೆ ಶಾಂತಿ, ಸದ್ಗತಿ ಕೋರಿದ್ದಾರೆ.
ಬಳಿಕ, ಆಶ್ಲೇಷಾ ಬಲಿ ಹಾಗೂ ನಾರಾಯಣ ಬಲಿಯನ್ನೂ ನೆರವೇರಿಸಿದರು. ಈ ಸಂದರ್ಭದಲ್ಲಿ ವಿನೋದ್ ರಾಜ್ ಅವರ ಆತ್ಮೀಯರು ಭಾಗಿಯಾಗಿದ್ದರು.