ಎಆರ್ ರೆಹಮಾನ್ ಪುತ್ರಿ ಖತಿಜಾ ಅನಿಮೇಟೆಡ್ ಸಂಗೀತ ವಿಡಿಯೋ ಜಾಗತಿಕ ಪ್ರಶಸ್ತಿಗೆ ಭಾಜನ

ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಪುತ್ರಿ ಖತಿಜಾ ಅವರ ಅನಿಮೇಟೆಡ್ ಸಂಗೀತ ವಿಡಿಯೋ ಜಾಗತಿಕ ಪ್ರಶಸ್ತಿಗೆ ಭಾಜನವಾಗಿದೆ. 
ಮಗಳು ಖತೀಜಾ ಜೊತೆಗೆ ಎಆರ್ ರೆಹಮಾನ್
ಮಗಳು ಖತೀಜಾ ಜೊತೆಗೆ ಎಆರ್ ರೆಹಮಾನ್

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಪುತ್ರಿ ಖತಿಜಾ ಅವರ ಅನಿಮೇಟೆಡ್ ಸಂಗೀತ ವಿಡಿಯೋ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಅನಿಮೇಟೆಡ್ ಸಂಗೀತ ವಿಡಿಯೋ ಪ್ರಶಸ್ತಿಗೆ ಭಾಜನವಾಗಿದೆ. 

ಫರಿಶ್ಟನ್ ಎಂಬ ಹೆಸರಿನ ಅನಿಮೇಟೆಡ್ ಸಂಗೀತ ವಿಡಿಯೋಗೆ ಎಆರ್ ರೆಹಮಾನ್ ಪುತ್ರಿ ಖತಿಜಾ ಅಂತರರಾಷ್ಟ್ರೀಯ ಸೌಂಡ್ ಫ್ಯೂಚರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. 

ಈ ಅನಿಮೇಟೆಡ್ ಸಂಗೀತ ವಿಡಿಯೋಗೆ ಎಆರ್ ರೆಹಮಾನ್ ಅವರೇ ಸಂಗೀತ ನಿರ್ದೇಶಕ, ನಿರ್ಮಾಪಕರಾಗಿರುವುದರಿಂದ ಈ ಪ್ರಶಸ್ತಿ ತಾಂತ್ರಿಕವಾಗಿ ರೆಹಮಾನ್ ಗೆ ಸೇರುತ್ತದೆ. ಆದರೆ ರೆಹಮಾನ್ ಅವರು ಈ ವಿಡಿಯೋದ ಸಂಪೂರ್ಣ ಕೀರ್ತಿಯನ್ನು ಮಗಳಿಗೆ ಸಲ್ಲಿಸಿದ್ದಾರೆ. 

ಈ ಕುರಿತ ಸುದ್ದಿಯನ್ನು ಸ್ವತಃ ಎಆರ್ ರೆಹಮಾನ್ ಟ್ವೀಟ್ ಮಾಡಿದ್ದು, ಫರಿಶ್ಟನ್ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಇದು ಫರಿಶ್ಟನ್ ಗಳಿಸುತ್ತಿರುವ ಮೊದಲ ಪ್ರಶಸ್ತಿಯಲ್ಲ. ಕೆಲವೇ ದಿನಗಳ ಹಿಂದೆ ಈ ಸಂಗೀತ ವಿಡಿಯೋಗೆ ಗ್ಲೋಬಲ್ ಶಾರ್ಟ್ಸ್.ನೆಟ್ ನಲ್ಲಿ ನಡೆದ ಅಂತಾರಾಷ್ಟ್ರಿಯ ಕಿರು ಚಿತ್ರ ಸ್ಪರ್ಧೆಯಲ್ಲಿ ಅವಾರ್ಡ್ ಆಫ್ ಮೆರಿಟ್ ಗೆ ಭಾಜನವಾಗಿತ್ತು. ಇದಿಷ್ಟೇ ಅಲ್ಲದೇ ಲಾಸ್ ಏಂಜಲೀಸ್ ಫಿಲ್ಮ್ ಅವಾರ್ಡ್ ಗಳಲ್ಲಿ ಈ ವಿಡಿಯೋ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿತ್ತು.

ಫರಿಶ್ಟನ್ ನ್ನು ಖತಿಜಾ ರೆಹಾಮ್ ಆಕೆಯ ಸಂಗೀತ ಕ್ಷೇತ್ರದ ಪಯಣದ ಪ್ರಾರಂಭ ಎಂದು ಪರಿಗಣಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com