ಬಿಸಿ ಪಾಟೀಲ್ ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೆ ಯಶಸ್ ಸೂರ್ಯ ನಾಯಕ!
ಬಿಸಿ ಪಾಟೀಲ್ ನಿರ್ಮಾಣದ ಸಿನಿಮಾಗೆ ಸೂರಿ, ಹರಿಕೃಷ್ಣ, ವಿಕಾಸ್ ಮತ್ತು ಸುಧೀರ್ ಕೈ ಜೋಡಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲಿದ್ದಾರೆ.
Published: 10th November 2021 01:04 PM | Last Updated: 10th November 2021 01:52 PM | A+A A-

ಯಶಸ್ ಸೂರ್ಯ
ಸಚಿವ ಬಿಸಿ ಪಾಟೀಲ್ ನಿರ್ಮಾಣದ ಸಿನಿಮಾಗೆ ನಿರ್ದೇಶನ ಮಾಡುವುದಾಗಿ ಯೋಗರಾಜ್ ಭಟ್ ಜುಲೈ ತಿಂಗಳಲ್ಲ ಘೋಷಿಸಿದ್ದರು.
ಬಿಸಿ ಪಾಟೀಲ್ ನಿರ್ಮಾಣದ ಸಿನಿಮಾಗೆ ಸೂರಿ, ಹರಿಕೃಷ್ಣ, ವಿಕಾಸ್ ಮತ್ತು ಸುಧೀರ್ ಕೈ ಜೋಡಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲಿದ್ದಾರೆ.
ನವೆಂಬರ್ 14 ರಂದು ನಿರ್ಮಾಪಕರು ಅಧಿಕೃತವಾಗಿ ಚಲನಚಿತ್ರವನ್ನು ಪ್ರಾರಂಭಿಸಲು ಸಿದ್ಧರಾಗಿದ್ದು, ಯಶಸ್ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ .
ಇದನ್ನೂ ಓದಿ: ಕೃಷಿ ಸಚಿವ ಬಿಸಿ ಪಾಟೀಲ್ ಜೊತೆ ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾ
ಶಿಶಿರ ಮತ್ತು ರಾಮಧಾನ್ಯ ಸಿನಿಮಾದಲ್ಲಿ ನಟಿಸಿರುವ ಯಶಸ್ ಸೂರ್ಯ,ದರ್ಶನ್ ನಟನೆಯ ಚಿಂಗಾರಿ, ಕುರುಕ್ಷೇತ್ರ ಹಾಗೂ ಒಡೆಯ ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಾಜಕಾರಣಿ ಮಾಜಿ ಪೊಲೀಸ್ ಅಧಿಕಾರಿ ಸಚಿವ ಬಿಸಿ ಪಾಟೀಲ್ ಮೊದಲ ಪ್ರಯೋಗವಾಗಿದ್ದು, ಸ್ವಲ್ಪ ದಿನಗಳ ಬಳಿಕ ಸಿನಿಮಾ ಟೈಟಲ್ ಬಹಿರಂಗ ಪಡಿಸಲಾಗುವುದು.
ನಿರ್ದೇಶಕ ಯೋಗರಾಜ್ ಭಟ ಸದ್ಯ ಗಾಳಿಪಟ-2 ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.