ನಟ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಹಾಡಿನಿಂದ ಸಖತ್ ಸದ್ದು ಮಾಡುತ್ತಾ ಇದೆ. ಈ ಹಿಂದೆ ಮದಗಜ ಮೆಲೋಡಿ ಹಾಡಿನ ಮೂಲಕ ಗಮನ ಸೆಳೆದಿತ್ತು. ನಟಿ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡು ಮೆಲೋಡಿ ಲವ್ ಟ್ರ್ಯಾಕ್ ಸಿನಿಪ್ರಿಯರ ಮನ ಗೆದ್ದಿದೆ. ಗೆಳೆಯ ನನ್ನ ಗೆಳೆಯ ಅನ್ನೊ ಹಾಡಿನ ಬಳಿಕ ಈಗ ಮಸ್ತ್ ಮಾಸ್ ಹಾಡು ರಿಲೀಸ್ ಮಾಡಿದೆ ಚಿತ್ರತಂಡ.
ನವೆಂಬರ್ 12 ರಂದು ಸಾಂಗ್ ರಿಲೀಸ್ ಆಗಿದ್ದು, ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡನ್ನು 4 ಮಿಲಿಯನ್ ವೀಕ್ಷಣೆ ಕಂಡಿದೆ. ಸದ್ಯ ಸಿನಿಮಾ ಸೆನ್ಸಾರ್ ಬೋರ್ಡ್ ತಲುಪಿದೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಡಿಸೆಂಬರ್ 3 ರಂದು ಸಿನಿಮಾ ರಿಲೀಸ್ ಆಗಲಿದೆ.
ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮದಗಜ ಸಿನಿಮಾ1500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಮದಗಜ ಸಿನಿಮಾ ಸ್ಯಾಟಲೈಟ್ಮತ್ತು ಡಿಜಿಟಲ್ ಹಕ್ಕುಗಳು ಭಾರೀ ಹಣಕ್ಕೆ ಮಾರಾಟವಾಗಿ ವೆ ಎಂದು ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಮುರುಳಿ ನಟನೆಯ 'ಮದಗಜ' ಡಿಸೆಂಬರ್ ನಲ್ಲಿ ರಿಲೀಸ್
ಮದಗಜ ಚಿತ್ರದಲ್ಲಿ ಮಫ್ತಿ ನಾಯಕ ಶ್ರೀಮುರುಳಿ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಗಪತಿ ಬಾಬು ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ತಮಿಳು ನಟಿ ದೇವಯಾನಿ ಅವರು ಬೆಳ್ಳಿತೆರೆಗೆ ಮರಳುತ್ತಿದ್ದಾರೆ.
Advertisement