ನ.23ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ 'ಕೋಟಿಗೊಬ್ಬ 3' ಬಿಡುಗಡೆ
ಕಿಚ್ಚ ಸುದೀಪ್ (Kichcha Sudeepa) ನಟನೆಯ ‘ಕೋಟಿಗೊಬ್ಬ 3’ (Kotigobba 3) ಎಲ್ಲ ಅಡೆತಡೆಗಳನ್ನು ನಿವಾರಿಸಿ ಕಳೆದ ತಿಂಗಳು ಅಕ್ಟೋಬರ್ 15ರಂದು ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನೂ ಕಂಡಿತ್ತು.
ಈಗಲೂ ಹಲವೆಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದೇ ನವೆಂಬರ್ 23ರಂದು ‘ಕೋಟಿಗೊಬ್ಬ 3’ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಈ ಮೂಲಕ ಚಿತ್ರಮಂದಿರದಲ್ಲಿ ತೆರೆಕಂಡ 40 ದಿನಗಳ ನಂತರ ಕೋಟಿಗೊಬ್ಬ 3 ಒಟಿಟಿಯಲ್ಲಿ ಬರುತ್ತಿದೆ.
‘ಕೋಟಿಗೊಬ್ಬ 3’ ಸಿನಿಮಾ ನವೆಂಬರ್ 23ರಂದು ಅಮೇಜಾನ್ ಪ್ರೈಮ್ನಲ್ಲಿ ತೆರೆಗೆ ಬರುತ್ತಿದೆ. ಅಭಿಮಾನಿಯೋರ್ವ ಟ್ವಿಟರ್ನಲ್ಲಿ ಅಮೇಜಾನ್ ಪ್ರೈಮ್ ಹೆಲ್ಪ್ ಡೆಸ್ಕ್ಗೆ ‘ಕೋಟಿಗೊಬ್ಬ 3’ ಯಾವಾಗ ರಿಲೀಸ್ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಅಮೇಜಾನ್ ಪ್ರೈಮ್ ವಿಡಿಯೋ ಉತ್ತರ ನೀಡಿದೆ. ನವೆಂಬರ್ 23ಕ್ಕೆ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ ಎಂದು ಹೇಳಿದೆ. ಹೀಗಾಗಿ ಕಿಚ್ಚನ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ವೀಕ್ಷಿಸಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ