ರಂಗಿತರಂಗ ಹಿಂದಿ ರಿಮೇಕ್ ಹಕ್ಕುಗಳ ಮಾರಾಟ ಸುದ್ದಿ ಅಲ್ಲಗಳೆದ ನಿರ್ಮಾಪಕ

ರಂಗಿತರಂಗ ಸಿನಿಮಾದ ನಿರ್ಮಾಪಕರು ಹಕ್ಕು ಸ್ವಾಮ್ಯ ಮಾರಾಟಕ್ಕೆ ನಿರಾಕರಿಸಿದ್ದಾರೆ.
ರಂಗಿತರಂಗ ಸಿನಿಮಾ (ಸಂಗ್ರಹ ಚಿತ್ರ)
ರಂಗಿತರಂಗ ಸಿನಿಮಾ (ಸಂಗ್ರಹ ಚಿತ್ರ)

ಒನ್ ವೇ ಟಿಕೆಟ್ ಹಾಗೂ ಬೈಸಿಕಲ್ ಬಾಯ್ಸ್ ನ್ನು ನಿರ್ಮಿಸಿದ್ದ ನಿರ್ಮಾಪಕಿ, ನಟಿ ಕೋಮಲ್ ಉನಾವ್ನೆ ರಂಗಿ ತರಂಗ ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್ ಮಾಡುವುದಕ್ಕೆ ಹಕ್ಕು ಖರೀದಿಸಿರುವುದಾಗಿ ತಿಳಿಸಿದ್ದರು. ಆದರೆ ರಂಗಿತರಂಗ ಸಿನಿಮಾದ ನಿರ್ಮಾಪಕರು ಹಕ್ಕು ಸ್ವಾಮ್ಯ ಮಾರಾಟಕ್ಕೆ ನಿರಾಕರಿಸಿದ್ದಾರೆ.

ರಂಗಿತರಂಗದ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದಿರುವುದಾಗಿ ಪ್ರೊಡಕ್ಷನ್ ಹೌಸ್ ಒಂದು ಹೇಳುತ್ತಿದೆ. ಆದರೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳನ್ನು ರಂಗಿತರಂಗ ಸಿನಿಮಾದ ಸಹ ನಿರ್ಮಾಪಕ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಸುಧಾಕರ್ ಭಂಡಾರಿ ಸಾಜ ಅವರು ಹೊಂದಿದ್ದಾರೆ. 

ನಮ್ಮ ಕಾನೂನಾತ್ಮಕ ಅನುಮತಿ ಇಲ್ಲದೇ ಯಾರಾದರೂ ರಂಗಿತರಂಗ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡುವುದಾಗಲೀ ಖರೀದಿ ಮಾಡುವುದಾಗಿ ಅಥವಾ ರಿಮೇಕ್ ಮಾಡುವುದಾಗಲೀ ಮಾಡಿದರೆ ಅದು ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಭಂಡಾರಿ ತಿಳಿಸಿದ್ದಾರೆ. 

ಈ ಸಂಬಂಧದ ದೂರಿಗೆ ಕೋಮಲ್ ಉನಾವ್ನೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ರಂಗಿತರಂಗ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದು, ಹೆಚ್ ಕೆ ಪ್ರಕಾಶ್ ನಿರ್ಮಿಸಿದ್ದರು. 2015 ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಸಾಯಿಕುಮಾರ್ ನಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com