'ಸಂಗೀತ ಕಲಹವನ್ನು ತಪ್ಪಿಸುತ್ತದೆ, ಶೀಘ್ರವೇ ಸರಿಗಮಪ ತಂಡವನ್ನು ಸೇರಿಕೊಳ್ಳುತ್ತೇನೆ': ಡಾ. ಹಂಸಲೇಖ
ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ದಲಿತ ಕೇರಿಗಳಿಗೆ ಹೋಗುತ್ತಿದ್ದ ಬಗ್ಗೆ ಮತ್ತು ಅವರ ಆಹಾರ ಪದ್ಧತಿ ಬಗ್ಗೆ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಇಂದು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
Published: 28th November 2021 01:26 PM | Last Updated: 29th November 2021 01:25 PM | A+A A-

ಡಾ ಹಂಸಲೇಖ
ಬೆಂಗಳೂರು: ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶ ತೀರ್ಥ(Pejawar shree) ಸ್ವಾಮೀಜಿಗಳು ದಲಿತ ಕೇರಿಗಳಿಗೆ ಹೋಗುತ್ತಿದ್ದ ಬಗ್ಗೆ ಮತ್ತು ಅವರ ಆಹಾರ ಪದ್ಧತಿ ಬಗ್ಗೆ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ(Hamsalekha) ಇಂದು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಹಂಸಲೇಖ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಇತ್ತೀಚೆಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಸಹ ಹಾಜರಾಗಿದ್ದರು. ಈ ಬೆಳವಣಿಗೆಗಳಿಂದ ನೊಂದು ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಹಂಸಲೇಖ ಪರ ಮತ್ತು ವಿರೋಧ ಅಭಿಯಾನಗಳು ಆರಂಭವಾಗಿ ಸರಿಗಮಪ ರಿಯಾಲಿಟಿ ಶೋದಿಂದ ಅವರು ಹೊರಬಂದಿದ್ದಾರೆ, ಅವರನ್ನು ಶೋನ ತೀರ್ಪುಗಾರರ ಸ್ಥಾನದಿಂದ ತೆಗೆದುಹಾಕಬೇಕೆಂಬ ಒತ್ತಾಯಗಳೂ ಸಹ ಕೇಳಿಬಂದಿತ್ತು.
ಇದನ್ನೂ ಓದಿ: 'ನಾನು ಆರೋಗ್ಯವಾಗಿದ್ದೇನೆ, ಅಭಿಮಾನ ಆವೇಶವಾಗುವುದು ಬೇಡ, ನಾನು ಕೇಳದೆಯೆ ಸರ್ಕಾರ ನನ್ನ ಮನೆಗೆ ಭದ್ರತೆ ಕೊಟ್ಟಿದೆ': ಡಾ. ಹಂಸಲೇಖ
ಇದಕ್ಕೆಲ್ಲಾ ಇಂದು ತೆರೆ ಎಳೆದಿರುವ ಹಂಸಲೇಖ, ನನ್ನ ಆರೋಗ್ಯ ಸ್ಥಿರವಾಗಿದ್ದು, ಸರಿಗಮಪ ಸಂಗೀತ ರಿಯಾಲಿಟಿ ಶೋ ನನ್ನ ಪ್ರೀತಿಯ ಭೂಮಿಕೆ, ಮನಸ್ಸು-ಮನಸ್ಸುಗಳನ್ನು ನೇಯುವ ವೇದಿಕೆ, ತೊರೆಯುವುದಿಲ್ಲ, ಸದ್ಯದಲ್ಲಿಯೇ ತಂಡಕ್ಕೆ ಬೇಗ ಸೇರಿಕೊಳ್ಳುತ್ತೇನೆ ಎಂದು ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.