ತಮಿಳು ಹಿರಿಯ ನಟ ದಿವಂಗತ ಶಿವಾಜಿ ಗಣೇಶನ್ ಗೆ ಗೂಗಲ್ ಡೂಡಲ್ ಗೌರವ!

ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟನಾಗಿ ಮೆರೆದವರು ಶಿವಾಜಿ ಗಣೇಶನ್​.​ ಇಂದು (ಅ.1) ಅವರ ಜನ್ಮದಿನ. 93ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. 
ಗೂಗಲ್ ಡೂಡಲ್
ಗೂಗಲ್ ಡೂಡಲ್

ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟನಾಗಿ ಮೆರೆದವರು ಶಿವಾಜಿ ಗಣೇಶನ್​.​ ಇಂದು (ಅ.1) ಅವರ ಜನ್ಮದಿನ. 93ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. 

ಆನ್​ಲೈನ್​ ಸರ್ಚ್​​ ಇಂಜಿನ್​ ಗೂಗಲ್​ ಕೂಡ ಶಿವಾಜಿ ಗಣೇಶನ್​ ಅವರಿಗೆ ತನ್ನ ಡೂಡಲ್​ ಮೂಲಕ ಗೌರವ ಸಲ್ಲಿಸಿದೆ. ಗೂಗಲ್​ ಮುಖಪುಟದಲ್ಲಿನ ಲೋಗೋವನ್ನು ವಿಶೇಷ ರೀತಿಯಲ್ಲಿ ಬದಲಾಯಿಸುವ ಮೂಲಕ ಈ ರೀತಿಯ ಡೂಡಲ್​ ಮಾಡಲಾಗುತ್ತದೆ.

ಇಂಥ ಗೌರವ ಸಿಗುವುದು ಕೆಲವೇ ಮಂದಿಗೆ ಮಾತ್ರ. ಇಂದು ಶಿವಾಜಿ ಗಣೇಶನ್​ ಅವರ 93ನೇ ಜನ್ಮದಿನದ ಪ್ರಯುಕ್ತ ಗೂಗಲ್​ ಡೂಡಲ್ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗಿದೆ.

ಶಿವಾಜಿ ಗಣೇಶನ್​ ಜನಿಸಿದ್ದು 1928ರ ಅ.1 ರಂದು. ಅಂದಿನ ಮದ್ರಾಸ್​ ಪ್ರೆಸಿಡೆನ್ಸಿಯ ವಿಲ್ಲುಪುರಂನಲ್ಲಿ ಜನಿಸಿದ ಅವರ ಮೂಲ ಹೆಸರು ಗಣೇಶಮೂರ್ತಿ. 7ನೇ ವಯಸ್ಸಿನಲ್ಲಿ ಇರುವಾಗಲೇ ಅವರು ಮನೆ ಬಿಟ್ಟು ಒಂದು ನಾಟಕ ತಂಡವನ್ನು ಸೇರಿಕೊಂಡರು. 

ಬಾಲ ನಟನಾಗಿ, ಸ್ತ್ರೀಪಾತ್ರಗಳನ್ನು ಮಾಡುತ್ತ ನಟನೆಯ ಅನುಭವ ಪಡೆದರು. ನಂತರ ನಾಟಕಗಳಲ್ಲಿ ಮುಖ್ಯಪಾತ್ರಗಳು ಸಿಗಲು ಪ್ರಾರಂಭವಾದವು. 1945ರಲ್ಲಿ ಅವರು ಛತ್ರಪತಿಶಿವಾಜಿ ಪಾತ್ರವನ್ನು ಮಾಡಿ ಫೇಮಸ್​ ಆದರು. ಅಂದಿನಿಂದ ಅವರ ಹೆಸರಿನ ಜೊತೆ ಆ ಪಾತ್ರದ ಹೆಸರು ಕೂಡ ಸೇರಿಕೊಂಡಿತು. ‘ಶಿವಾಜಿ ಗಣೇಶನ್’​ ಎಂದೇ ಅವರು ಖ್ಯಾತರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com