'ಟಗರು' ಯಶಸ್ಸಿನ ನಂತರ ಹೊಸ ಸಿನಿಮಾಗಾಗಿ ಸೂರಿ-ಶಿವರಾಜ್ ಕುಮಾರ್ ಮಾತುಕತೆ!

ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ, ದುನಿಯಾ ನಿರ್ದೇಶಕ ಸೂರಿ ಮತ್ತು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹೊಸ ಸಿನಿಮಾಗಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ,
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್

ಟಗರು ಸಿನಿಮಾ ಯಶಸ್ಸಿನ ನಂತರ  ಶಿವಣ್ಣ ಮತ್ತು ಸೂರಿ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು.

ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ, ದುನಿಯಾ ನಿರ್ದೇಶಕ ಸೂರಿ ಮತ್ತು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹೊಸ ಸಿನಿಮಾಗಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ, 

ಸದ್ಯ ಸೂರಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಶೀಘ್ರವೇ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಸೂರಿಯೊಂದಿಗೆ ಮಾಡಿದ ಕಡ್ಡಿಪುಡಿ ಮತ್ತು ಟಗರು ಸಿನಿಮಾ ಬೆಳ್ಳಿತೆರೆ ಮೇಲೆ ಮ್ಯಾಜಿಕ್ ಮಾಡಿದ್ದವು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. 

ಸೂರಿ ಯಾವಾಗಲೂ ನನಗಾಗಿ ವಿಭಿನ್ನವಾದ ಕತೆ ತಯಾರು ಮಾಡುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ, ನನ್ನ ಮುಂದಿನ ಪ್ರಾಜೆಕ್ಟ್ ಉತ್ತಮವಾಗಿರುತ್ತದೆ ಮತ್ತು ದೊಡ್ಡದಾಗಿರುತ್ತದೆ, ಈ ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಶಿವರಾಜ್ ಕುಮಾರ್ ಅವರ ಭಜರಂಗಿ2 ಸಿನಿಮಾ ರಿಲೀಸ್ ಗಾಗಿ ಸಿದ್ಧವಾಗಿದೆ, ಹರ್ಷ ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 29 ರಂದು ಬಿಡುಗಡೆಯಾಗಲಿದೆ.  ಇದರ ಜೊತೆಗೆ ವಿಜಯ್ ಮಿಲ್ಟನ್ ಅವರ ಭೈರಾಗಿ, ರಾಮ್ ಧುಳಿಪುಡಿ ನಿರ್ದೇಶನದ ನೀ ಸಿಗುವವರೆಗೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹರ್ಷ ನಿರ್ದೇಶನದ ಮುಂದಿನ ವೇದ ಸಿನಿಮಾದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದಾರೆ. ಶಿವಣ್ಣ ಹೋಮ್ ಬ್ಯಾನರ್ ನ ಮೊದಲ ಸಿನಿಮಾವಾಗಿದೆ. ಗೀತಾ ಪಿಕ್ಚರ್ಸ್ ಅಡಿ ಸಿನಿಮಾ ತಯಾರಾಗಲಿದೆ. ಲೋಹಿತ್ ಎಚ್ ನಿರ್ದೇಶನದ ಸತ್ಯಮಂಗಳದಲ್ಲಿಯೂ ಶಿವಣ್ಣ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com