ಹೈದರಾಬಾದ್: 'ಮಾ' ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಗೆ ಸೋಲು
ಭಾನುವಾರ ನಡೆದ ‘ತೆಲುಗು ಮೂವೀಸ್ ಆರ್ಟಿಸ್ಟ್ಸ್ ಅಸೋಶಿಯೇಷನ್’ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಅವರು ಸೋಲನುಭವಿಸಿದ್ದಾರೆ.
ಮಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು, ನಟ ಹಾಗೂ ನಿರ್ಮಾಪಕ ಮೋಹನ್ ಬಾಬು ಅವರ ಮಗ ಮಂಚು ವಿಷ್ಣು ವಿರುದ್ಧ ಸುಮಾರು 400 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
900 ಮತಗಳು ಚಲಾವಣೆಗೊಂಡಿದ್ದು, ಮತ ಎಣಿಕೆ ತಡರಾತ್ರಿವರೆಗೂ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಪ್ರಕಾಶ್ ರಾಜ್ ಪ್ಯಾನೆಲ್‌ನ ನಟ ಶ್ರೀಕಾಂತ್ ಅವರು ಉಪಾಧ್ಯಕ್ಷ ಸ್ಥಾನ ಗೆದ್ದುಕೊಂಡಿದ್ದು ಬಿಟ್ಟರೇ, ಬಹುತೇಕ ಸ್ಥಾನಗಳನ್ನು ಮಂಚು ವಿಷ್ಣು ಅವರ ಪ್ಯಾನೆಲ್ ಗೆದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಷ್ಣು ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಮಂಚು ವಿಷ್ಣು ಗೆಲುವಿನಲ್ಲಿ ಅವರ ತಂದೆ ಮೋಹನ್ ಬಾಬು ಅವರ ಶ್ರಮ ದೊಡ್ಡದಿದೆ ಎನ್ನಲಾಗುತ್ತಿದೆ.
ಚುನಾವಣೆಗೂ ಪೂರ್ವ ತೆಲುಗು ಚಿತ್ರರಂಗದಲ್ಲಿ ಮಾ ಚುನಾವಣೆ ವಿಷಯ ಬಹಳ ಜೋರಾಗಿ ನಡೆದಿತ್ತು. ನಟ ಚಿರಂಜೀವಿ ಹಾಗೂ ಅವರ ಕುಟುಂಬದವರ ಬೆಂಬಲ ಇದ್ದರೂ ಪ್ರಕಾಶ್ ರಾಜ್ ಸೋತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ