'ಕ್ರಾಂತಿ' ಯಲ್ಲಿ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ; ನನ್ನ ಸಿನಿ ಪಯಣ ಮರಳಿ ಆರಂಭ: ರಚಿತಾ ರಾಮ್
ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಸಿನಿಮಾದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬುಲ್ ಬುಲ್ ಬೆಡಗಿ ರಚಿತಾ ರಾಮ್ ನಾಯಕಿಯಾಗಿದ್ದಾರೆ.
Published: 16th October 2021 10:03 AM | Last Updated: 16th October 2021 07:21 PM | A+A A-

ಕ್ರಾಂತಿ ಸಿನಿಮಾ ಮೂಹೂರ್ತ
ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಸಿನಿಮಾದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬುಲ್ ಬುಲ್ ಬೆಡಗಿ ರಚಿತಾ ರಾಮ್ ನಾಯಕಿಯಾಗಿದ್ದಾರೆ.
ವಿಜಯದಶಮಿಯ ಶುಭ ಸಮಯದಂದು ಸಿನಿಮಾಗೆ ಮುಹೂರ್ತ ನಡೆಯಿತು. ನಟ ರವಿಚಂದ್ರನ್ ಮತ್ತು ಸುಮಲತಾ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.
ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾದೊಂದಿಗೆ ನನ್ನ ಸಿನಿಮಾ ಪಯಣ ಆರಂಭವಾಯಿತು. ಅದರ ನಂತರ 2013 ರಲ್ಲಿ ಅಂಬರೀಷ ಸಿನಿಮಾದಲ್ಲಿ ನಟಿಸಿದ್ದೆ, 8 ವರ್ಷಗಳ ನಂತರ ಮತ್ತೆ ನಾನು ದರ್ಶನ್ ಅವರೊಂದಿಗೆ ಅಭಿನಯಿಸುತ್ತಿದ್ದೇನೆ, ಮತ್ತೊಮ್ಮೆ ನನ್ನ ಸಿನಿಮಾ ಪಯಣ ಮರಳಿ ಆರಂಭವಾದಂತ ಅನುಭವವಾಗುತ್ತಿದೆ ಎಂದು ರಚಿತಾ ಹೇಳಿದ್ದಾರೆ.
ದರ್ಶನ್ ಜೊತೆ ತೆರೆ ಹಂಚಿಕೆ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ. ಅವರ ಜೊತೆ ಕೆಲಸ ಮಾಡುತ್ತಿರುವುದು ನನ್ನ ಆತ್ಮ ವಿಶ್ವಾಸ ಮತ್ತಷ್ಟು ಇಮ್ಮಡಿಯಾಗಿದೆ ಎಂದು ಹೇಳಿದ್ದಾರೆ.
ಕ್ರಾಂತಿಯಲ್ಲಿ ತಾನು ಪ್ರಮುಖ ಪಾತ್ರದಲ್ಲಿ ನಟಿಸುವುದಾಗಿ ರಚಿತಾ ಭರವಸೆ ವ್ಯಕ್ತ ಪಡಿಸಿದ್ದಾರೆ, ವಿ ಹರಿಕೃಷ್ಣ ಬುಲ್ ಬುಲ್‌ಗೆ ಸಂಗೀತ ನೀಡಿದ್ದರಿಂದ ಅವರ ಪರಿಚಯ ನನಗೆ ಚೆನ್ನಾಗಿದೆ. ಆದರ ನಾನು ಮೊದಲ ಬಾರಿಗೆ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ ಸುರೇಶರೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ರಚಿತಾ ತಿಳಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಹೊಸ ಚಿತ್ರದ ಹೆಸರು 'ಕ್ರಾಂತಿ': ಪ್ಯಾನ್ ಇಂಡಿಯಾ ಸಿನಿಮಾಗೆ ಹರಿಕೃಷ್ಣ ನಿರ್ದೇಶನ
ಅಕ್ಟೋಬರ್ 15 ರಿಂದ ಕ್ರಾಂತಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ದರ್ಶನ್ ನಾಯಕನಾಗಿರುವ ಮಾಸ್ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾದಲ್ಲಿ ರವಿಚಂದ್ರನ್ ಕೂಡ ನಟಿಸಿದ್ದಾರೆ.
ಸಿನಿಮಾದಲ್ಲಿ ರವಿಚಂದ್ರನ್ ದರ್ಶನ್ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ದರ್ಶನ್ ಕುರುಕ್ಷೇತ್ರ ಸಿನಿಮಾದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ನಿರ್ವಹಿಸಿದ್ದರು, ಕ್ರಾಂತಿಯಲ್ಲಿ ಹಿರಿಯ ನಟಿ ಹಾಗೂ ರಾಜಕಾರಣಿ ಸುಮಲತಾ ಅಂಬರೀಷ್ ಕೂಡ ನಟಿಸಿದ್ದಾರೆ. ಹರಿಕೃಷ್ಣ ಅವರೇ ಸಿನಿಮಾಗೆ ಸಂಗೀತ ನೀಡಿದ್ದಾರೆ.