ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾಗೆ ಜಸ್ಸಿ ಗಿಫ್ಟ್ ಹಿನ್ನೆಲೆ ಗಾಯನ
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Published: 07th September 2021 02:10 PM | Last Updated: 07th September 2021 03:11 PM | A+A A-

777 ಚಾರ್ಲಿ ಸಿನಿಮಾ ಸ್ಟಿಲ್
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
777 ಚಾರ್ಲಿ ಸಿನಿಮಾ ಟೀಸರ್ ಗೆ ಅತ್ಯದ್ಭುತ ಪ್ರತಿಕ್ರಿಯೆ ದೊರೆತ ನಂತರ ಸಿನಿಮಾ ತಂಡ ಸಾಂಗ್ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದೆ. ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ತಮ್ಮ ಧ್ವನಿ ನೀಡಿದ್ದಾರೆ.
ತನ್ನ ವಿಶಿಷ್ಟ ಧ್ವನಿಗೆ ಹೆಸರುವಾಸಿಯಾದ ಜಸ್ಸಿ ಗಿಫ್ಟ್, ಮಲಯಾಳಂನಲ್ಲಿ ಹಾಡನ್ನು ಹಾಡಿದ್ದಾರೆ; ಗಾನ ಬಾಲಚಂದರ್, ವಿಜಯ್ ಪ್ರಕಾಶ್, ರಾಮ್ ಮಿರಿಯಾಲ ಮತ್ತು ಸ್ವರೂಪ್ ಖಾನ್ ಕ್ರಮವಾಗಿ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳ ಅವತರಣಿಕೆಗಳನ್ನು ಹಾಡಿದ್ದಾರೆ.
ಇದನ್ನೂ ಓದಿ:'ಪ್ಯಾನ್ ಇಂಡಿಯಾ' ಎಂಬುದು ಕೇವಲ ವ್ಯವಹಾರಿಕ ಸಂಬಂಧವಾಗಬಾರದು: '777 ಚಾರ್ಲಿ' ಬಗ್ಗೆ ರಕ್ಷಿತ್ ಶೆಟ್ಟಿ ಮಾತು
ಕಿರಣ್‌ರಾಜ್ ಬರೆದು ನಿರ್ದೇಶಿಸಿರಿುವ 777 ಚಾರ್ಲಿಯಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಒಂದು ಪೂರ್ಣ ಪ್ರಮಾಣದ ಪಾತ್ರವನ್ನು ಲ್ಯಾಬ್ರಡಾರ್ ನಾಯಿ ನಿರ್ವಹಿಸುತ್ತಿದೆ. ಈ ಚಿತ್ರದ ಮೂಲಕ ಬಾಬಿ ಸಿಂಹ ಅವರು ಕನ್ನಡಕ್ಕೆ ಪ್ರವೇಶಿಸುತ್ತಿದ್ದಾರೆ.
ಸಂಗೀತ ಶೃಂಗೇರಿ ಮಹಿಳಾ ನಾಯಕಿಯರಾಗಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪರಮಾವ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಿಎಸ್ ಗುಪ್ತಾ ಸಿನಿಮಾ ನಿರ್ಮಿಸುತ್ತಿದ್ದಾರೆ. ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ.