ನಟ ಮಮ್ಮೂಟಿ 70ನೇ ಹುಟ್ಟುಹಬ್ಬಕ್ಕೆ 600 ಮೊಬೈಲ್ ಬಳಸಿ ದೈತ್ಯ ಭಾವಚಿತ್ರ ರಚಿಸಿದ ಕೇರಳ ಕಲಾವಿದ
70ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಲಯಾಳಂ ಖ್ಯಾತ ನಟ ಮಮ್ಮೂಟಿ ಅವರ ಅಭಿಮಾನಿಯೊಬ್ಬರು ನೂರಾರು ಮೊಬೈಲ್ ಫೋನ್ ಮತ್ತು ಅದರ ಪರಿಕರಗಳಿಂದ 20 ಅಡಿ ಉದ್ದದ ಭಾವಚಿತ್ರವನ್ನು ರಚಿಸಿದ್ದಾರೆ.
Published: 07th September 2021 11:30 PM | Last Updated: 08th September 2021 01:09 PM | A+A A-

ಮಮ್ಮೂಟಿ ಭಾವಚಿತ್ರ
ತ್ರಿಶೂರ್: 70ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಲಯಾಳಂ ಖ್ಯಾತ ನಟ ಮಮ್ಮೂಟಿ ಅವರ ಅಭಿಮಾನಿಯೊಬ್ಬರು ನೂರಾರು ಮೊಬೈಲ್ ಫೋನ್ ಮತ್ತು ಅದರ ಪರಿಕರಗಳಿಂದ 20 ಅಡಿ ಉದ್ದದ ಭಾವಚಿತ್ರವನ್ನು ರಚಿಸಿದ್ದಾರೆ.
ಮೆಲಯಾಳಂ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ನಟನಿಗೆ ಉಡುಗೊರೆಯಾಗಿ ನೀಡಲು ಈ ವಿಶಿಷ್ಟವಾದ ಭಾವಚಿತ್ರವನ್ನು ಸೃಷ್ಟಿಸಲಾಗಿದೆ.
ನಟನ ಭಾವಚಿತ್ರವನ್ನು ತ್ರಿಶೂರ್ ಕೆಬೀಸ್ ದರ್ಬಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಇರಿಸಲಾಗಿದೆ. ಕಲಾವಿದ ಡಾವಿಂಚಿ ಸುರೇಶ್ ಅವರ ಪ್ರಕಾರ, ಭಾವಚಿತ್ರವು 20 ಅಡಿಗಳಷ್ಟು ಉದ್ದ ಇದ್ದು, ಇದನ್ನು 600 ಮೊಬೈಲ್ ಫೋನ್‌ಗಳು ಮತ್ತು 6,000 ಮೊಬೈಲ್ ಪರಿಕರಗಳನ್ನು ಬಳಸಿ ತಯಾರಿಸಲಾಗಿದೆ.
"ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ನಟ ಮಮ್ಮೂಟಿಗೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಭಾವಚಿತ್ರವನ್ನು ಮೊಬೈಲ್ ಅಂಗಡಿಯ ಮಾಲೀಕರಾದ ಅನಸ್ ಅವರು ನೀಡಿದ್ದಾರೆ.
ಈ ಕನ್ವೆನ್ಶನ್ ಸೆಂಟರ್ ಈ ಕಲಾಕೃತಿಯನ್ನು ರಚಿಸಲು ಅಗತ್ಯವಾದ ಜಾಗದ ವ್ಯವಸ್ಥೆ ಮಾಡಿದೆ. ನಾನು ಸಿಬ್ಬಂದಿಯ ಸಹಾಯದಿಂದ ಕೆಲಸವನ್ನು ಪೂರ್ಣಗೊಳಿಸಿದ್ದೇನೆ ಎಂದು ಕಲಾವಿದ ಹೇಳಿದ್ದಾರೆ.
1951ರ ಸೆಪ್ಟೆಂಬರ್ 7ರಂದು ಜನಿಸಿದ, ಮಮ್ಮುಟ್ಟಿಯ ಪೂರ್ಣ ನಾಮ ಮುಹಮ್ಮದ್ ಕುಟ್ಟಿ ಪನಪರಂಬಿಲ್ ಇಸ್ಮೈಲ್. 1971ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಇದುವರೆಗೆ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಮಲಯಾಳಂನ ಬ್ಯುಸಿ ನಟರಲ್ಲೊಬ್ಬರು.