ಇಂದಿರಾ ಗಾಂಧಿ ಅವರಿಂದಲೇ ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ: ನಟ ಚೇತನ್
ರಾಜಕೀಯವಾಗಿ ಹಲವಾರು ಕಮೆಂಟ್ ಗಳನ್ನು ಮಾಡುತ್ತಿರುವ ನಟ ಚೇತನ್ ಇದೀಗ ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರೇ ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದ್ದಾರೆ.
Published: 11th September 2021 11:18 PM | Last Updated: 11th September 2021 11:18 PM | A+A A-

ಇಂದಿರಾ ಗಾಂಧಿ-ಚೇತನ್
ಬೆಂಗಳೂರು: ರಾಜಕೀಯವಾಗಿ ಹಲವಾರು ಕಮೆಂಟ್ ಗಳನ್ನು ಮಾಡುತ್ತಿರುವ ನಟ ಚೇತನ್ ಇದೀಗ ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರೇ ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕುರಿತು ಮಾತಿನ ಸಮರ ಶುರು ಮಾಡಿರುವ ಚೇತನ್ ಇದೀಗ ಇಂದಿರಾ ಗಾಂಧಿ ಬಗ್ಗೆ ಮಾತನಾಡಿದ್ದಾರೆ.
1959 ರಲ್ಲಿ ಜವಹಾರ್ಲಾಲ್ ನೆಹರೂ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ ಮಗಳಾದ ಇಂದಿರಾ ಗಾಂಧಿಯವರು ತಮ್ಮದೇ ಆದಂತಹ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಡೈನಸ್ಟ್ ಇಂದಿರಾ ಒಬ್ಬ ಪ್ರಶ್ನಾರ್ಹ ಪ್ರಧಾನಿ ಆಗುತ್ತಾರೆ, ಆ ಮೂಲಕ ಕಾಂಗ್ರೆಸ್‌ನ ಕುಟುಂಬ ರಾಜಕೀಯ ಮತ್ತು ಸ್ವಜನ ಪಕ್ಷಪಾತಕ್ಕೆ ಅಡಿಪಾಯ ಹಾಕುತ್ತಾರೆ. ಕೇವಲ ಕೆಲವು ಗಣ್ಯ ವ್ಯಕ್ತಿಗಳಿಗಷ್ಟೇ ಅಲ್ಲದೇ, ನಮ್ಮೆಲ್ಲರಿಗೂ ನಮ್ಮ ದೇಶವನ್ನು ಕಟ್ಟುವ ಅವಕಾಶ ದೊರಕಬೇಕು.