
ರಘು ಮುಖರ್ಜಿ
'ಡಾಲಿ' ಧನಂಜಯ್ ನಟಿಸುತ್ತಿರುವ 'ಹೆಡ್‌ಬುಷ್' ಸಿನಿಮಾದಲ್ಲಿ ಸ್ಟಾರ್ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಕನ್ನಡದ ಹಲವು ಯುವ ನಟರು ಅಭಿನಯಿಸುತ್ತಿದ್ದಾರೆ.
ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಈಗ ಮತ್ತೊಬ್ಬ ಖ್ಯಾತ ಕಲಾವಿದನ ಪ್ರವೇಶವಾಗಿದೆ.ಪ್ಯಾರಿಸ್ ಪ್ರಣಯ, ಸವಾರಿ, ಜೆಸ್ಸಿ ಅಂತಹ ಚಿತ್ರಗಳ ಮೂಲಕ ಕನ್ನಡಿಗರ ಅಭಿಮಾನ ಗಳಿಸಿರುವ ರಘು ಮುಖರ್ಜಿ ಈಗ ಹೆಡ್‌ಬುಷ್ ಚಿತ್ರತಂಡ ಸೇರಿದ್ದಾರೆ. ಡಾಲಿ ಜೊತೆ ರಘು ಮುಖರ್ಜಿ ಪ್ರಮುಖ ಪಾತ್ರವೊಂದನ್ನು ನಟಿಸುತ್ತಿರುವ ಬಗ್ಗೆ ಇಂದು ಅಧಿಕೃತವಾಗಿದೆ.
ಸ್ವತಃ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಘು ಮುಖರ್ಜಿ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಡ್‌ಬುಷ್ ಚಿತ್ರದಲ್ಲಿ ಈಗಾಗಲೇ ಕನ್ನಡದ ಹಲವು ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್ ಅಂತಹ ತಾರೆಯರು ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಇವರ ಜೊತೆ ರಘು ಮುಖರ್ಜಿ ಎಂಟ್ರಿಯಾಗಿದೆ.
ಕೊನೆಯದಾಗಿ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ರಘು ಮುಖರ್ಜಿ ನಟಿಸಿದ್ದರು. 2021ರ ಫೆಬ್ರವರಿ ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದರು