ಪಿಆರ್ ಕೆ ಬ್ಯಾನರ್ ನ ಮೆಡಿಕಲ್ ಥ್ರಿಲ್ಲರ್ 'O2' ನಲ್ಲಿ ಆಶಿಕಾ ರಂಗನಾಥ್!
ಕಮರ್ಷಿಯಲ್ ಸಿನಿಮಾ ಮತ್ತು ವಿಷಯಾಧಾರಿತ ಕತೆಗಳ ನಡುವೆ ಹಗ್ಗ ಜಗ್ಗಾಟ ನಡೆಸುತ್ತಿರುವ ನಟಿ ಆಶಿಕಾ ರಂಗನಾಥ್, ಪಿಆರ್ ಕೆ ಪ್ರೊಡಕ್ಷನ್ ನ ಮೆಡಿಕಲ್ ಥ್ರಿಲ್ಲರ್ 'O2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Published: 15th September 2021 01:49 PM | Last Updated: 15th September 2021 02:11 PM | A+A A-

ಆಶಿಕಾ ರಂಗನಾಥ್
ಕಮರ್ಷಿಯಲ್ ಸಿನಿಮಾ ಮತ್ತು ವಿಷಯಾಧಾರಿತ ಕತೆಗಳ ನಡುವೆ ಹಗ್ಗ ಜಗ್ಗಾಟ ನಡೆಸುತ್ತಿರುವ ನಟಿ ಆಶಿಕಾ ರಂಗನಾಥ್, ಪಿಆರ್ ಕೆ ಪ್ರೊಡಕ್ಷನ್ ನ ಮೆಡಿಕಲ್ ಥ್ರಿಲ್ಲರ್ 'O2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಾಘವ್ ಮತ್ತು ಪ್ರಶಾಂತ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ನಟ ಪುನೀತ್ ರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್ ಕೆ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಒಬ್ಬ ಕಲಾವಿದನಾಗಿ ನನ್ನ ಅನುಭವದೊಂದಿಗೆ, ನನ್ನ ಸ್ಕ್ರಿಪ್ಟ್ ಆಯ್ಕೆಗಳು ಹೇಗೆ ಬದಲಾಗಿವೆ ಎಂಬುದನ್ನು ನಾನು ನೋಡಿದ್ದೇನೆ. ಮೇಲಾಗಿ, ವಿಷಯ ಆಧಾರಿತ ಸಿನಿಮಾ, ಒಟಿಟಿ ಯಲ್ಲಿ ರಿಲೀಸ್ ನೊಂದಿಗೆ ಪಾಲ್ಗೋಳ್ಳಲು ಇದು ಸಕಾಲ ಎಂದು ನಾನು ಭಾವಿಸಿದೆ, ಮತ್ತು O2 ಆ ನಿಟ್ಟಿನಲ್ಲಿ ನನ್ನ ಮೊದಲ ಪ್ರಯತ್ನವಾಗಿದೆ ಎಂದು ನಟಿ ಆಶಿಕಾ ರಂಗನಾಥ್ ಹೇಳಿದ್ದಾರೆ.
ಸದ್ಯ ತಮಿಳು ಸಿನಿಮಾದಲ್ಲಿ ಆಶಿಕಾ ಬ್ಯುಸಿಯಾಗಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಗುಣಂ ನಿರ್ದೇಶನ ಸಿನಿಮಾದಲ್ಲಿ ಅಥರ್ವ ಮುರುಳಿಗೆ ನಾಯಕಿಯಾಗಿದ್ದಾರೆ. ರಾಘವ್ ಮತ್ತು ಪ್ರಶಾಂತ್ ಬರೆದಿರುವ ಕಥೆ ನನಗೆ ತುಂಬಾ ಇಷ್ಟವಾಯಿತು.
"ಸಾಮಾನ್ಯವಾಗಿ, ನಾಯಕಿಯ ಪಾತ್ರವವನ್ನು ಪಾತ್ರವನ್ನು ಬಲಿಪಶುವಾಗಿ ತೋರಿಸಲಾಗುತ್ತದೆ. O2 ನಾನು ಸಾಮಾನ್ಯ ನಾಯಕಿಯಾಗಿ ಕಾಣಿಸಿಕೊಳ್ಳದ ಚಿತ್ರವಾಗಿದೆ ಎಂದು ಹೇಳಿದ್ದಾರೆ.
O2 ಸಿನಿಮಾ ನನಗೆ ವಿಶೇಷ ಪಾತ್ರ ನೀಡಿದೆ, ಈ ಕಥೆ ನನಗೆ ತುಂಬಾ ಹತ್ತಿರವಾಗಿದೆ, ಸದ್ಯ ರೈಮೋ, ಅವತಾರ್ ಪುರುಷ ಮತ್ತು ಮದಗಜ ಸಿನಿಮಾಗಳಲ್ಲಿ ಆಶಿಕಾ ನಟಿಸುತ್ತಿದ್ದಾರೆ. ವೈವಿಧ್ಯಮಯವಾದ ಕಥೆಗಳೊಂದಿಗೆ ತಮ್ಮ ಬಹುಮುಕ ಪ್ರತಿಬೆಯನ್ನು ತೋರಿಸಲು ಆಶಿಕಾ ಸಿದ್ದರಾಗುತ್ತಿದ್ದಾರೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ ಮುಂದಿನ ಚಿತ್ರ O2, ಕವಲುದಾರಿ, ಮಾಯಾಬಜಾರ್ ಮತ್ತು ಫ್ರೆಂಚ್ ಬಿರಿಯಾನಿ ನಂತರ, ಅವರ ಬ್ಯಾನರ್ ನಿಂದ ಬರುವ ಮತ್ತೊಂದು ಆಸಕ್ತಿದಾಯಕ ಸಿನಿಮಾವಾಗಿದೆ. ತಂಡವು ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ, ಅಕ್ಟೋಬರ್‌ನಲ್ಲಿ ಪ್ರಾಜೆಕ್ಟ್ ಪ್ರಾರಂಭವಾಗಲಿದೆ.