'ದಿ ಕಲರ್ ಆಫ್ ಟೊಮೆಟೋ' ನನಗೆ ಹೊಸ ಪ್ರಕಾರದ ಸಿನಿಮಾ: ಪ್ರತಾಪ್ ನಾರಾಯಣ್

ಬೆಂಕಿಪಟ್ಣ ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಪ್ರತಾಪ್ ನಾರಾಯಣ್ ದಿ ಕಲರ್ ಆಫ್ ಟೊಮೋಟೋ ಎಂಬ ಸಿನಿಮಾ ದಲ್ಲಿ ನಟಿಸಿದ್ದಾರೆ. ತಾಯಿ ಲೋಕೇಶ್ ನಿರ್ದೇಶನದ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು
ಪ್ರತಾಪ್ ನಾರಾಯಣ್
ಪ್ರತಾಪ್ ನಾರಾಯಣ್

ಬೆಂಕಿಪಟ್ಣ ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಪ್ರತಾಪ್ ನಾರಾಯಣ್ ದಿ ಕಲರ್ ಆಫ್ ಟೊಮೋಟೋ ಎಂಬ ಸಿನಿಮಾ ದಲ್ಲಿ ನಟಿಸಿದ್ದಾರೆ. ತಾಯಿ ಲೋಕೇಶ್ ನಿರ್ದೇಶನದ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು.

ಹಿಂಸೆಯ ವ್ಯಾಖ್ಯಾನ ಬದಲಾಗ್ತಿದೆ, ಅದಕ್ಕೆ ಹೊಸ ಡೈಮೆನ್ಶನ್ ಬಂದಿದೆ. ದಿ ಕಲರ್ ಆಫ್ ಟೊಮೆಟೊ ಈಗಿರುವ ಸಿನಿಮಾ ವ್ಯಾಖ್ಯಾನ, ವ್ಯಾಕರಣ ಬದಲಿಸುವ, ಕಿಮ್ ಕಿ ಡುಕ ಮಾದರಿಯ ಚಿತ್ರ’ ಎಂದು ಹಿರಿಯ ಲೇಖಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ನಿರ್ದೇಶಕ ತಾಯಿ ಲೋಕೇಶ್ ಮಾತನಾಡಿ, ‘ಏಷ್ಯಾದ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಕೋಲಾರದಲ್ಲಿದೆ. ಇಲ್ಲಿನ ಆರ್ಥಿಕತೆ ನೆಲದ ಅಧಃಪತನಕ್ಕೆ ಸಂಕೇತದಂತಿದೆ. ಜೊತೆಗೆ ಏಳೆಂಟು ಗುಡ್ಡಗಾಡು ಹಳ್ಳಿಗಳು, ಅಲ್ಲಿನ ಜನರು, ಹಿಂಸೆ, ಕೌರ್ಯದ ಚಿತ್ರಣ ಇದರಲ್ಲಿದೆ. ಮೂರು ಕತೆಗಳು ಒಟ್ಟು ಸೇರಿ ಒಂದು ಚಿತ್ರವಾಗಿದೆ’ ಎಂದರು.

ತೆಲುಗಿನ ಸಿನಿಮಾ ಬಂಡಿ ಸಿನಿಮಾದಲ್ಲಿ ನಟಿಸಿದ್ದ, ರಂಗಭೂಮಿ ಕಲಾವಿದೆ ವೈ.ಜಿ ಉಮಾ ಪ್ರತಾಪ್ ನಾರಾಯಣ್ ಎದುರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ಹಿರಿಯ ನಟ ಬಿ.ಸುರೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಾಪ್ ನಟನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ನಟನಾ ವೃತ್ತಿಯ ಮೇಲೆ ಗಮನ ಕೇಂದ್ರೀಕರಿಸಲು ನಾನು ಉದ್ಯೋಗದಿಂದ ವಿರಾಮ ತೆಗೆದುಕೊಂಡೆ, ಆದರೆ ಕೊರೋನಾ ಸಾಂಕ್ರಾಮಿಕವು ಮತ್ತೆ ನನ್ನನ್ನು ನನ್ನ 9 ರಿಂದ 5 ಉದ್ಯೋಗಕ್ಕೆ ಕರೆದೊಯ್ಯಿತು, ಮತ್ತು ಈಗ ನಾನು ನನ್ನ ಎರಡು ವೃತ್ತಿಗಳ ನಡುವೆ ಜಗ್ಗಾಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ. ಕಲರ್ ಆಫ್ ಟೊಮೊಟೋ ಸಿನಿಮಾದಲ್ಲಿ ತಮ್ಮ, ಪಾತ್ರದ ಬಗ್ಗೆ ಮಾತನಾಡಿದ ಪ್ರತಾಪ್ ಇದುವರೆಗೂ ನಟಿಸದ ಪಾತ್ರ ಇದು ಎಂದು ಹೇಳಿದ್ದಾರೆ. ನನ್ನ ಹಿಂದಿನ ಚಿತ್ರ ಬೆಂಕಿ ಪಟ್ಣದಲ್ಲಿ ಮಿಸ್ ಆದ ಅಂಶಗಳು ಈ ಪಾತ್ರದಲ್ಲಿ ಸಿಗುತ್ತವೆ’ ಎಂದರು. 

ಕಡಿಮೆ ಮಾತನಾಡುವ ಮತ್ತು ಹೆಚ್ಚು ಕೆಲಸ ಮಾಡುವ ವ್ಯಕ್ತಿಯ ಕಥೆ. ಇದು ಕೋಲಾರ ಮೂಲದ ಕಥೆ ಮತ್ತು ದೊಡ್ಡ ಟೊಮೆಟೊ ಮಾರುಕಟ್ಟೆಯ ಸುತ್ತ ಸುತ್ತುತ್ತದೆ. ಇದು ನನಗೆ ಹೊಸ ಪ್ರಕಾರವಾಗಿದೆ ಎಂದು ಅವರು ಹೇಳುತ್ತಾರೆ. ಕಲರ್ ಆಫ್ ಟೊಮೊಟೊಗ ಅರ್ಜುನ್ ರಾಮು ಸಂಗೀತ ನೀಡಿದ್ದು, ಪ್ರಶಾಂತ್ ಸಾಗರ್ ಛಾಯಾಗ್ರಹಣ ಮಾಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com