'ಹೆಡ್ ಬುಷ್' ನಲ್ಲಿ ಪ್ರೊಫೆಸರ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ!
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ತಂಡವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದ್ದಾರೆ. ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರವಿಚಂದ್ರನ್ ಹೆಡ್ ಬುಷ್ ಸಿನಿಮಾದಲ್ಲಿ ತಾವು ಪ್ರೊಫೆಸರ್ ಪಾತ್ರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
Published: 16th September 2021 12:46 PM | Last Updated: 16th September 2021 12:48 PM | A+A A-

ರವಿಚಂದ್ರನ್
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ತಂಡವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದ್ದಾರೆ. ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರವಿಚಂದ್ರನ್ ಹೆಡ್ ಬುಷ್ ಸಿನಿಮಾದಲ್ಲಿ ತಾವು ಪ್ರೊಫೆಸರ್ ಪಾತ್ರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಶೂನ್ಯ ನಿರ್ದೇಶನ ಮಾಡಿದ್ದಾರೆ, ಅವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿಲ್ಲ, ಅವರು ಸಿನಿಮಾ ಬಗ್ಗೆ ತುಂಬಾ ಫರ್ಫೆಕ್ಟ್ ಆಗಿದ್ದಾರೆ ಎಂದು ರವಿಚಂದ್ರನ್ ತಿಳಿಸಿದ್ದಾರೆ.
ಶೂನ್ಯ ನಿರ್ದೇಶನದ ಹೆಡ್ ಬುಷ್ ಸಿನಿಮಾದಲ್ಲಿ, ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್, ರಘು ಮುಖರ್ಜಿ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.
ಇದರ ಜೊತೆಗೆ ರವಿಚಂದ್ರನ್ ನಿರ್ದೇಶನದ ರವಿ ಭೂಪಣ್ಣ ರಿಲೀಸ್ ಗಾಗಿ ಕಾಯುತ್ತಿದೆ, ಕನ್ನಡಿಗ ಡಬ್ಬಿಂಗ್ ಹಂತದಲ್ಲಿದೆ. ಇತ್ತೀಚೆಗೆ ರವಿಚಂದ್ರನ್ ದೃಶ್ಯ2 ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ, ಶೀಘ್ರದಲ್ಲೇ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಲಿದ್ದಾರೆ.