ಸೆಪ್ಟಂಬರ್ 21 ರಿಂದ ಶ್ರೀನಗರ ಕಿಟ್ಟಿ ನಟನೆಯ 'ಗೌಳಿ' ಶೂಟಿಂಗ್ ಪ್ರಾರಂಭ
ಶ್ರೀನಗರ ಕಿಟ್ಟಿ ನಟನೆಯ ಗೌಳಿ ಸಿನಿಮಾವನ್ನು ಸೂರಾ ನಿರ್ದೇಶಿಸುತ್ತಿದ್ದು ಈಗಾಗಲೇ ಪೋಸ್ಟರ್ ರಿಲೀಸ್ ಆಗಿದೆ. ಸೆಪ್ಟಂಬರ್ 21 ರಿಂದ ಶೂಟಿಂಗ್ ಆರಂಭವಾಗಲಿದ್ದು, ಯಲ್ಲಾಪುರ ಮತ್ತು ಶಿರಸಿ ಸೇರಿದಂತೆ ಹಲೆವೆಡೆ ಚಿತ್ರೀಕರಣ ನಡೆಯಲಿದೆ.
Published: 16th September 2021 01:21 PM | Last Updated: 16th September 2021 02:22 PM | A+A A-

ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ ನಟನೆಯ ಗೌಳಿ ಸಿನಿಮಾವನ್ನು ಸೂರಾ ನಿರ್ದೇಶಿಸುತ್ತಿದ್ದು ಈಗಾಗಲೇ ಪೋಸ್ಟರ್ ರಿಲೀಸ್ ಆಗಿದೆ. ಸೆಪ್ಟಂಬರ್ 21 ರಿಂದ ಶೂಟಿಂಗ್ ಆರಂಭವಾಗಲಿದ್ದು, ಯಲ್ಲಾಪುರ ಮತ್ತು ಶಿರಸಿ ಸೇರಿದಂತೆ ಹಲೆವೆಡೆ ಚಿತ್ರೀಕರಣ ನಡೆಯಲಿದೆ.
ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪಾವನಾ ನಾಯಕಿಯಾಗಿದ್ದಾರೆ, ಸೋಹನ್ ಫಿಲ್ಮ್ ಫ್ಯಾಕ್ಟಕಿ ಬ್ಯಾನರ್ ಅಡಿ ರಘು ಸಿಂಗಮ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಯಶ್ ಶೆಟ್ಟಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಂಗಾಯಣ ರಘು ಮತ್ತು ಶುದ್ದಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ಗೌಡ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜನಪ್ರಿಯ ಹಿನ್ನೆಲೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸುತ್ತಿದ್ದಾರೆ.