ಸಾಹಸ ಸಿಂಹನ ಮರಳು ಶಿಲ್ಪ
ಸಿನಿಮಾ ಸುದ್ದಿ
ಒಡಿಶಾ ಸಮುದ್ರ ತೀರದಲ್ಲಿ ಅರಳಿದ ಸಾಹಸ ಸಿಂಹನ ಮರಳು ಶಿಲ್ಪ!
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವರ 71ನೇ ಜನ್ಮದಿನ. ಈ ಪ್ರಯುಕ್ತ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.
ಬೆಂಗಳೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವರ 71ನೇ ಜನ್ಮದಿನ. ಈ ಪ್ರಯುಕ್ತ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.
ಡಾ.ವಿಷ್ಣುವರ್ಧನ್ ಗೌರವಾರ್ಥ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ರಚಿಸಲಾಗಿದೆ.
ಖ್ಯಾತ ಮರಳು ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಇದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ, ವಿಷ್ಣು ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ ಒದಗಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ