'ಲಕ್ಕಿ ಮ್ಯಾನ್' ಚಿತ್ರದಲ್ಲಿ ದೇವರ ಪಾತ್ರದಲ್ಲಿ ಪುನೀತ್: ಭಾವುಕರಾದ ಫ್ಯಾನ್ಸ್!

ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ನಟನೆಯ 'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಲಕ್ಕಿ ಮ್ಯಾನ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು.
ಲಕ್ಕಿ ಮ್ಯಾನ್ ಸ್ಟಿಲ್
ಲಕ್ಕಿ ಮ್ಯಾನ್ ಸ್ಟಿಲ್

ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ನಟನೆಯ 'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಲಕ್ಕಿ ಮ್ಯಾನ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು.

ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಾಗೇಂದ್ರ ಪ್ರಸಾದ್ ಅವರ ತಂದೆ ಮೂಗುರ್ ಸುಂದರ್, ಅವರ ಸಹೋದರರಾದ ರಾಜು ಸುಂದರಂ ಮತ್ತು ಪ್ರಭುದೇವ, ನಟರಾದ ಕಿಚ್ಚ ಸುದೀಪ್, ರಾಕ್ ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಮತ್ತು ಯುವರಾಜಕುಮಾರ್, ಸಾಧು ಕೋಕಿಲ ಮತ್ತು ತಮಿಳು ನಟ ವಿಜಯ್ ಆಂಟೋನಿ ಭಾಗವಹಿಸಿದ್ದರು.

ಕೃಷ್ಣ, ಸಂಗೀತಾ ಶೃಂಗೇರಿ, ಮತ್ತು ರೋಶನಿ ಪ್ರಕಾಶ್ ಸೇರಿದಂತೆ ಎಲ್ಲರೂ ಅಪ್ಪು ಬಗ್ಗೆ ಮಾತನಾಡಿ, ತಾವು ಪುನೀತ್ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ತಿಳಿಸಿದರು. ಈ ಚಿತ್ರವು ತಮಿಳಿನ ಹಿಟ್ ಚಿತ್ರ 'ಓಹ್ ಮೈ ಕಡವುಲೆ'ಯ ರೂಪಾಂತರವಾಗಿದೆ, ಫ್ಯಾಂಟಸಿ ರೊಮ್ಯಾಂಟಿಕ್ ಡ್ರಾಮಾದ ಕನ್ನಡ ಅವತರಣಿಕೆಯಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಮತ್ತು ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪುನೀತ್ ನಟನೆಯ ಬಾರೋ ರಾಜಾಸಾಂಗ್‌ನ ಲಿರಿಕಲ್ ವೀಡಿಯೊದಲ್ಲಿ ಪ್ರಭುದೇವ ಅವರೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯವನ್ನು ವೀಕ್ಷಿಸಿದ ಅಭಿಮಾನಿಗಳು ಭಾವುಕರಾದರು, ಅದರ ನಂತರ ಪುನೀತ್ ಅವರನ್ನು ದೇವರಂತೆ ಚಿತ್ರಿಸಿರುವ ಟ್ರೈಲರ್ ರಿಲೀಸ್  ಮಾಡಲಾಯಿತು.

ಈ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ದೇವರ ಪಾತ್ರ ಮಾಡಿದ್ದಾರೆ. ಅದೊಂದು ನಂಬಿಕೆ. ಅವರು ಬದುಕಿದ ರೀತಿಯೇ ಆಗಿತ್ತು. ನಾವೆಲ್ಲರೂ ಅವರನ್ನು ಮಿಸ್​ ಮಾಡಿಕೊಳ್ಳುತ್ತೇವೆ. ಆದರೆ ಟ್ರೇಲರ್​ ನೋಡುವಾಗ ನಾನು ಸ್ಮೈಲ್​ ಮಾಡುತ್ತಿದ್ದೆ. ಯಾಕೆಂದರೆ ಅವರಿಗೆ ಈ ಸಿನಿಮಾ ಹೆಚ್ಚು ಹೊಂದಿಕೆ ಆಗುತ್ತಿದೆ. ಎಲ್ಲರೂ ಈ ಸಿನಿಮಾವನ್ನು ತಬ್ಬಿಕೊಂಡು ಅನುಭವಿಸಿ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಈ ಹಿಂದೆ ಅಪ್ಪು ಅವರ ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ ನಾನು ನಾಯಕನಾಗಿ ನಟಿಸಿರುವ ಚಿತ್ರದಲ್ಲಿ ಅವರು ನಟಿಸಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಕೃಷ್ಣ ತಿಳಿಸಿದ್ದಾರೆ. ನಾಗೇಂದ್ರ ಪ್ರಸಾದ್, ಲಕ್ಕಿ ಮ್ಯಾನ್‌ನ ಭಾಗವಾಗಿರುವ ಎಲ್ಲರಿಗೂ ವಿಶೇಷವಾಗಿ ಅಪ್ಪು ಅವರನ್ನು ಕರೆತರಲು ಸಹಾಯ ಮಾಡಿದ ಅವರ ಸಹೋದರ ಪ್ರಭುದೇವ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಚಿತ್ರವನ್ನು ಪಾರ್ಸಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಿಆರ್ ಮೀನಾಕ್ಷಿ ಸುಂದರಂ ಮತ್ತು ಆರ್ ಸುಂದರ ಕಾಮರಾಜ್ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com