'ಗುರು-ಶಿಷ್ಯರು' ಸಿನಿಮಾದ 'ಗುರುಗಳು ನಮ್ಮ ಗುರುಗಳು' ಟ್ರ್ಯಾಕ್ ಮೂಲಕ ಶಿಕ್ಷಕರಿಗೆ ಗೌರವ ಸಮರ್ಪಣೆ!

ಗುರು ಶಿಷ್ಯರು ಚಿತ್ರದ ಮೊದಲ ಆಣೆ ಮಾಡಿ ಹೇಳುತೇನಿ ಹಾಡು ಕೇಳುಗರಿಗೆ ಪ್ರಿಯವಾಗುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಎರಡನೇ ಟ್ರ್ಯಾಕ್ ರಿಲೀಸ್ ಮಾಡಿದ್ದಾರೆ.
ಗುರು ಶಿಷ್ಯರು ಸಿನಿಮಾ ಸ್ಟಿಲ್
ಗುರು ಶಿಷ್ಯರು ಸಿನಿಮಾ ಸ್ಟಿಲ್

ಗುರು ಶಿಷ್ಯರು ಚಿತ್ರದ ಮೊದಲ ಆಣೆ ಮಾಡಿ ಹೇಳುತೇನಿ ಹಾಡು ಕೇಳುಗರಿಗೆ ಪ್ರಿಯವಾಗುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಎರಡನೇ ಟ್ರ್ಯಾಕ್ ರಿಲೀಸ್ ಮಾಡಿದ್ದಾರೆ.

ಗುರುಗಳು ನಮ್ಮ ಗುರುಗಳು ಎಂಬ ಈ ಹಾಡು ಶಿಕ್ಷಕರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ನಟರಾದ ದತ್ತಣ್ಣ ಮತ್ತು ಶರಣ್ ಜೊತೆಗೆ ಕರ್ನಾಟಕದ ಹಲವು ಶಿಕ್ಷಕರು ನಟಿಸಿದ್ದಾರೆ.

ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದು,  ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ  ಬರೆದಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಸಿನಿಮಾದಲ್ಲಿ 13 ಯುವನಟರು ಅಭಿನಯಿಸಿದ್ದಾರೆ, ವಿದ್ಯಾರ್ಥಿಗಳು ಖೋ ಖೋ  ತಂಡದ ಸದಸ್ಯರ ಪಾತ್ರ ನಿರ್ವಹಿಸಿದ್ದಾರೆ.  . ಏಕಾಂತ್ (ನೆನಪಿರಲಿ ಪ್ರೇಮ್ ಅವರ ಮಗ), ರಕ್ಷಕ (ದಿವಂಗತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ), ಮಣಿಕಂಠ ನಾಯಕ್ (ಶಾಸಕ ರಾಜುಗೌಡ ಅವರ ಮಗ), ಸೂರ್ಯ (ರವಿ ಶಂಕರ್ ಗೌಡ ಅವರ ಮಗ), ಮತ್ತು ಹರ್ಷಿತ್ (ನವೀನ್ ಕೃಷ್ಣ ಅವರ ಮಗ) ಚಿತ್ರದ ಭಾಗವಾಗಿದ್ದಾರೆ. ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣದೊಂದಿಗೆ, ಗುರು ಶಿಷ್ಯರು ಚಿತ್ರ ಸದ್ಯಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com