ನಾನು ಮೊದಲು ಕಲಾವಿದ, ನಂತರ ನಾಯಕ: ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ

ನಾನು ಮತ್ತು ಗುಂಡ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಹಾಸ್ಯ ಕಲಾವಿದ ಶಿವರಾಜ್ ಕೆ.ಆರ್ ಪೇಟೆ ಅವರ ಮುಂದಿನ ಕಾಮಿಡಿ ಸಿನಿಮಾ ಧಮಾಕಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಶಿವರಾಜ್ ಕೆಆರ್ ಪೇಟೆ
ಶಿವರಾಜ್ ಕೆಆರ್ ಪೇಟೆ

ನಾನು ಮತ್ತು ಗುಂಡ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಹಾಸ್ಯ ಕಲಾವಿದ ಶಿವರಾಜ್ ಕೆ.ಆರ್ ಪೇಟೆ ಅವರ ಮುಂದಿನ ಕಾಮಿಡಿ ಸಿನಿಮಾ ಧಮಾಕಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ನಾನು ಹಾಸ್ಯ ಕಲಾವಿದನಾಗಿದ್ದರೂ ವಿಭಿನ್ನ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಶಿವರಾಜ್ ಹೇಳಿದ್ದಾರೆ. ಧಮಾಕ ಸಿನಿಮಾ ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವಾಗಿದೆ, ಮಧ್ಯಮ ವರ್ಗದ ಮೌಲ್ಯಗಳ ಕುರಿತ ಕೌಟುಂಬಿಕ ಕಥೆಯಾಗಿದ್ದು ಸಂದೇಶ ಹೊಂದಿದೆ ಎಂದು ಹೇಳಿದ್ದಾರೆ. ಸೆಪ್ಟಂಬರ್ 2 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವಾಗಿದೆ.

ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ಧಮಾಕ ಲಕ್ಷ್ಮಿ ರಮೇಶ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಮತ್ತೊಬ್ಬ ಜನಪ್ರಿಯ ಹಾಸ್ಯ ಕಲಾವಿದೆ ನಯನಾ ನಾಯಕಿಯಾಗಿ ನಟಿಸಿದ್ದಾರೆ.

ನಾನು ನಯನಾ ಅವರೊಂದಿಗೆ ಒಂದೆರಡು ಸ್ಕಿಟ್‌ಗಳಲ್ಲಿ ಕೆಲಸ ಮಾಡಿದ್ದರೂ, ನಾವು ಚಿತ್ರದಲ್ಲಿ ಸ್ಕ್ರೀನ್‌ಸ್ಪೇಸ್ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಹಲವಾರು ಹಾಸ್ಯ ಪಾತ್ರಗಳಲ್ಲಿ ನಟಿಸಿ ನಾಯಕನಾಗಿ ಕಾಣಿಸಿಕೊಂಡರೂ ಕಾಮಿಕ್ ಪಾತ್ರಗಳಲ್ಲಿ ನಟಿಸುವುದನ್ನು ಬಿಟ್ಟಿಲ್ಲ ಎಂದು ಶಿವರಾಜ್ ತಿಳಿಸಿದ್ದಾರೆ.

ನಾನು ಪ್ರಮುಖ ಪಾತ್ರಗಳನ್ನು ಮಾತ್ರ ನಿರ್ವಹಿಸುವತ್ತ ಸಾಗಿದ್ದೇನೆ ಎಂಬುದು ಚಿತ್ರೋದ್ಯಮದ ಊಹೆಯಾಗಿದೆ. ಆದಾಗ್ಯೂ, ನಾನು ಹಾಸ್ಯನಟ ಮತ್ತು ಪಾತ್ರಗಳಲ್ಲಿ ನಟಿಸುವುದನ್ನು ಆನಂದಿಸುತ್ತೇನೆ. ಅದು 5 ದಿನಗಳ ಪಾತ್ರವಾಗಲಿ ಅಥವಾ 30 ದಿನಗಳ ಪಾತ್ರವಾಗಲಿ ನಾನು ಅದನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ನಾನು ಯಾವುದೇ ರೀತಿಯ ಪಾತ್ರಗಳಿಂದದ ದೂರವಿರುವುದಿಲ್ಲ ಎಂದು ಶಿವರಾಜ್ ಹೇಳಿದ್ದಾರೆ.

ತೀಶ್ ನೀನಾಸಂ ನಟನೆಯ ಮ್ಯಾಟಿನಿಯಲ್ಲಿ  ಹಾಗೂ ಮತ್ತು ಪ್ರಜ್ವಲ್ ದೇವರಾಜ್ ಅವರ ಗಣ ಸಿನಿಮಾದಲ್ಲಿಯೂ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ. ಹರಿ ಸಂತೋಷ್ ಅವರ ಮುಂದಿನ ಪ್ರಾಜೆಕ್ಟ್‌ನಲ್ಲಿ ನಾನು ನಟಿಸುತ್ತಿದ್ದೇನೆ, ಇವೆಲ್ಲಸಿನಮಾಗಳಿಗೆ ನಾಯಕರಾಗಿ ಇತರ ನಟರಿದ್ದಾರೆ. ನಾನು ಮೊದಲು ಕಲಾವಿದ, ನಂತರ ನಾಯಕ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com