ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ರಾಜ್ ಕುಮಾರ್ ಚೊಚ್ಚಲ ಚಿತ್ರ ಬಿಡುಗಡೆ 

ರಾಜ್ ಕುಮಾರ್ ಕುಟುಂಬದ ಮತ್ತೊಂದು ಪ್ರತಿಭೆ ಯುವಾರಾಜ್ ಕುಮಾರ್ ಚೊಚ್ಚಲ ಚಿತ್ರದ ಬಗ್ಗೆ ಈಗಾಗಲೇ ಹಲವು ನಿರೀಕ್ಷೆಗಳು ಗರಿಗೆದರಿವೆ. 
ಯುವ ರಾಜ್ ಕುಮಾರ್
ಯುವ ರಾಜ್ ಕುಮಾರ್

ರಾಜ್ ಕುಮಾರ್ ಕುಟುಂಬದ ಮತ್ತೊಂದು ಪ್ರತಿಭೆ ಯುವಾರಾಜ್ ಕುಮಾರ್ ಚೊಚ್ಚಲ ಚಿತ್ರದ ಬಗ್ಗೆ ಈಗಾಗಲೇ ಹಲವು ನಿರೀಕ್ಷೆಗಳು ಗರಿಗೆದರಿವೆ. 

ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ, ವಿನಯ್ ರಾಜ್ ಕುಮಾರ್ ಸಹೋದರ ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದ್ದಾಗಿರಲಿದೆ ಎಂಬುದು ಖಚಿತವಾಗಿದೆ.
 
ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರವನ್ನು ಕೆಜಿಎಫ್, ಕಾಂತಾರದಂತಹ ಯಶಸ್ವಿ, ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ.

ಇದನ್ನೂ ಓದಿ: 'ಯುವ ರಾಜಕುಮಾರ್ ಬೆಳ್ಳಿತೆರೆಗೆ ಹೊಸಬರೇ ಹೊರತು ಪ್ರೇಕ್ಷಕರಿಗಲ್ಲ ಆತ ಪ್ರತಿಭೆಯ ಬಂಡಲ್!'
 
ಹೊಂಬಾಳೆ ಫಿಲ್ಮ್ಸ್ ಜೊತೆಗೆ ಮೂರು ಸಿನಿಮಾಗಳು ಹಾಗೂ ಒಂದು ಸಿನಿಮಾಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಯುವರಾಜ್ ಕುಮಾರ್ ಸಹಿ ಹಾಕಿದ್ದಾರೆ ಎಂಬ ಊಹಾಪೋಹಗಳಿತ್ತು. ಆದರೆ ಸಿನಿಮಾ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಯುವಾ ರಾಜ್ ಕುಮಾರ್ ಅವರ ಆಪ್ತ ಮೂಲಗಳ ಪ್ರಕಾರ, ಅವರು ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲೇ ಸ್ಯಾಂಡಲ್ ವುಡ್ ಪ್ರವೇಶಿಸುವುದರತ್ತ ಹೆಚ್ಚು ಗಮನ ನೀಡುತ್ತಿದ್ದಾರಂತೆ. 

ಸಿ.ಇ ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತೋಷ್ ಹಾಗೂ ಯುವರಾಜ್ ಕುಮಾರ್ ಈಗ ಪ್ರೀಪ್ರೊಡಕ್ಷನ್ ನಲ್ಲಿ ತೊಡಗಿದ್ದು, ವೇಷಭೂಷಣ ಪ್ರಯೋಗ ಶೂಟ್ ಸಹ ಇತ್ತೀಚೆಗೆ ನಡೆದಿದೆ.

ಚಿತ್ರೀಕರಣ ನಡೆಯಬೇಕಾದ ಸ್ಥಳಗಳನ್ನೂ ಪಟ್ಟಿ ಮಾಡಲಾಗಿದ್ದು, ಕಲಾವಿದರ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಪ್ರೊಡಕ್ಷನ್ ಹೌಸ್ ಈ ತಿಂಗಳಲ್ಲೇ ಮುಹೂರ್ತಕ್ಕೆ ದಿನಾಂಕವನ್ನೂ ನಿಗದಿಪಡಿಸಿದ್ದು,  ಸಿನಿಮಾ ಚಿತ್ರೀಕರಣ 2023 ರ ಫೆಬ್ರವರಿಯಿಂದ ನಡೆಯಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com