ವಿನಯ್ ರಾಜಕುಮಾರ್ ನಟನೆಯ '10' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ಛಾಯಾಗ್ರಾಹಕ ಕರ್ಮ್ ಚಾವ್ಲಾ  ಚೊಚ್ಚಲ ನಿರ್ದೇಶನದ ವಿನಯ್ ರಾಜ್‌ಕುಮಾರ್ ನಟನೆಯ 10 ಸಿನಿಮಾ  ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.
ವಿನಯ್  ರಾಜಕುಮಾರ್
ವಿನಯ್ ರಾಜಕುಮಾರ್
Updated on

ಛಾಯಾಗ್ರಾಹಕ ಕರ್ಮ್ ಚಾವ್ಲಾ ಚೊಚ್ಚಲ ನಿರ್ದೇಶನದ ವಿನಯ್ ರಾಜ್‌ಕುಮಾರ್ ನಟನೆಯ 10 ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.

ಬಿಡುಗಡೆಯ ಕುರಿತು ನಿರ್ಮಾಪಕರಾದ ಪುಷ್ಕರ್ ಫಿಲ್ಮ್ಸ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ಚಿತ್ರತಂಡ ಶುಕ್ರವಾರದಂದು ಮೊದಲ ಸಿನಿಮಾದ ಮೊದಲ ಹಾಡು ಏನಾಗಿದೆ ರಿಲೀಸ್ ಮಾಡಿದೆ.

ವಿನಯ್, ಸಿನಿಮಾ ಎಕ್ಸ್‌ಪ್ರೆಸ್‌ಗೆ ನೀಡಿದ್ದ ಹಿಂದಿನ ಸಂದರ್ಶನದಲ್ಲಿ, ಪಾತ್ರಕ್ಕಾಗಿ ಕಠಿಣ ತರಬೇತಿಯ ಬಗ್ಗೆ ಮಾತನಾಡಿದ್ದರು. “ನಾನು ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದೆ ಮತ್ತು ಒಂದೂವರೆ ಗಂಟೆ ಬಾಕ್ಸಿಂಗ್‌ಗೆ ಹೋಗುತ್ತಿದ್ದೆ. ಕಟ್ಟುನಿಟ್ಟಿನ ಆಹಾರ ಕ್ರಮವನ್ನೂ ಅನುಸರಿಸಿದ್ದೇನೆ. ಇದೆಲ್ಲವೂ ನನ್ನನ್ನು ಪರಿವರ್ತಿಸಲು ಸಹಾಯ ಮಾಡಿತು ಎಂದು ಹೇಳಿದ್ದರು. ಅನುಷಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಕರ್ಮ್ ಚಾವ್ಲಾ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಯುವ ನಟ ವಿನಯ್ ರಾಜಕುಮಾರ್ ವೃತ್ತಿಪರ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದು ಡಿಸೆಂಬರ್ 16 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com