ಪ್ರಸಿದ್ಧ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ವಿಧಿವಶ

ಕನ್ನಡ ಸಿನಿಮಾ ಮತ್ತು ಕಿರುತೆರೆ ಜಗತ್ತಿನ ಹೆಸರಾಂತ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಬುಧವಾರ ನಿಧನ ಹೊಂದಿದ್ದಾರೆ.
ಮನೋರಂಜನ್ ಪ್ರಭಾಕರ್
ಮನೋರಂಜನ್ ಪ್ರಭಾಕರ್
Updated on

ಬೆಂಗಳೂರು: ಕನ್ನಡ ಸಿನಿಮಾ ಮತ್ತು ಕಿರುತೆರೆ ಜಗತ್ತಿನ ಹೆಸರಾಂತ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಬುಧವಾರ ನಿಧನ ಹೊಂದಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಪತ್ನಿ, ಒಬ್ಬ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಂಗೀತ ಪರಂಪರೆಯ ಕುಟುಂಬ ದಲ್ಲಿ ಜನಿಸಿದ್ದ (ತಂದೆ ಪಂಡಿತ್‌ ಬಿ.ಎನ್‌. ಪಾರ್ಥಸಾರಥಿ ನಾಯ್ಡು, ತಾಯಿ ಗೋವಿಂದಮ್ಮ) ಅವರು 70ರ ದಶಕದ ಆರಂಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು.

ಮನೋರಂಜನ್‌ ಮತ್ತು ತಂಡ ಹೆಸರಿನಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. 1980ರ ಅವಧಿಯಲ್ಲಿ ಇದು ಹೆಸರಾಂತ ತಂಡವಾಗಿತ್ತು. ಅವರು ಸುಮಾರು 800ಕ್ಕೂ ಹೆಚ್ಚು ಸಂಗೀತ ಆಲ್ಬಂ ಹೊರತಂದಿದ್ದಾರೆ.

90ರ ದಶಕದಲ್ಲಿ ಅವರು ಕೆಲಕಾಲ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಕರಾಗಿದ್ದರು. 2003ರಲ್ಲಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್‌ ಅಕಾಡೆಮಿ, ಶ್ರುತಿಲಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ ಮೂಲಕ ಸಂಗೀತಾಸಕ್ತರಿಗೆ ತರಬೇತಿ ನೀಡುತ್ತಿದ್ದರು.

ಕಾರ್ತಿಕ ದೀಪ ಸೇರಿದಂತೆ ಅನೇಕ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗೆ ಸಂಗೀತ ಅಳವಡಿಸಿದ ಹೆಗ್ಗಳಿಕೆ ಇವರದ್ದು. ಕೆಲಕಾಲ ಇವರು ಆದರ್ಶ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com