ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

'ಅವತಾರ್ 2' ನೋಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು!

ಇತ್ತೀಚಿನ ದಿನಗಳಲ್ಲಿ ನೃತ್ಯ ಮಾಡುವಾಗ ಮತ್ತು ಕೆಲವೊಮ್ಮೆ ಜಿಮ್ ಮಾಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದ ಪ್ರಕರಣಗಳು ವರದಿಯಾಗುತ್ತಿವೆ. ಆದರೆ 'ಅವತಾರ್ 2' ಚಿತ್ರ ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 
Published on

ಇತ್ತೀಚಿನ ದಿನಗಳಲ್ಲಿ ನೃತ್ಯ ಮಾಡುವಾಗ ಮತ್ತು ಕೆಲವೊಮ್ಮೆ ಜಿಮ್ ಮಾಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಪಟ್ಟಣದಲ್ಲಿ 'ಅವತಾರ್ 2' ಚಿತ್ರ ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ಈ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂನಲ್ಲಿ ನಡೆದಿದೆ. ಮೃತನನ್ನು ಲಕ್ಷ್ಮೀರೆಡ್ಡಿ ಶ್ರೀನು ಎಂದು ಗುರುತಿಸಲಾಗಿದೆ. ಮೃತ ಶ್ರೀನು ತನ್ನ ಸಹೋದರ ರಾಜು ಜೊತೆಗೆ ಅವತಾರ್ 2 ಚಿತ್ರ ವೀಕ್ಷಿಸಲು ಪೆದ್ದಾಪುರಂಗೆ ತೆರಳಿದ್ದರು. ಚಿತ್ರದ ಮಧ್ಯೆಯೇ ಲಕ್ಷ್ಮಿರೆಡ್ಡಿ ಶ್ರೀನು ಕುಸಿದುಬಿದ್ದಿದ್ದಾನೆ. ಸಹೋದರ ರಾಜು ತಕ್ಷಣ ಅಣ್ಣನನ್ನು ಪೆದ್ದಾಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಲಕ್ಷ್ಮೀರೆಡ್ಡಿ ಶ್ರೀನು ಅವರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಹೃದಯಾಘಾತಗಳು ಹೇಗೆ ಸಂಭವಿಸುತ್ತವೆ?
ಹೃದಯಕ್ಕೆ ರಕ್ತದ ಹರಿವು ತೀವ್ರವಾಗಿ ಕಡಿಮೆಯಾದಾಗ ಅಥವಾ ನಿರ್ಬಂಧಿಸಿದಾಗ ಹೃದಯಾಘಾತವು ಸಾಮಾನ್ಯವಾಗಿ ಸಂಭವಿಸುತ್ತದೆ. ಹೃದಯಾಘಾತವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದು ಕರೆಯಲಾಗುತ್ತದೆ.

ಅವತಾರ್ 2
ದಶಕದ ಅತ್ಯಂತ ಯಶಸ್ವಿ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರಗಳಲ್ಲಿ ಒಂದಾದ 'ಅವತಾರ್' ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅದರ ಮುಂದುವರಿದ ಭಾಗವಾದ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರವು ಜೇಕ್ ಮತ್ತು ನೆಯ್ಟಿರಿಯ ಮಗನ ಸಾಹಸಗಳ ಮೇಲೆ ಬಿಂಬಿತವಾಗಿದೆ. ಚಿತ್ರದಲ್ಲಿ ಸ್ಯಾಮ್ ವರ್ತಿಂಗ್ಟನ್, ಸಿಗೌರ್ನಿ ವೀವರ್, ಜೊಯಿ ಸಲ್ಡಾನಾ, ಸ್ಟೀಫನ್ ಲ್ಯಾಂಗ್ ಮತ್ತು ಮಿಚೆಲ್ ರೊಡ್ರಿಗಸ್ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com