ಭಾರತದಾದ್ಯಂತ 450 ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ 100 ಕೋಟಿ ಕ್ಲಬ್ ಸೇರಿದ 777 ಚಾರ್ಲಿ!

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ '777 ಚಾರ್ಲಿ' ಸಿನಿಮಾವು ಯಶಸ್ವಿಯಾಗಿ 25 ದಿನ ಪೂರೈಸಿದೆ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಈ ವೇಳೆ ಚಿತ್ರದ ಕಲೆಕ್ಷನ್‌ ಬಗ್ಗೆಯೂ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.
'777 ಚಾರ್ಲಿ' ಚಿತ್ರ ತಂಡ
'777 ಚಾರ್ಲಿ' ಚಿತ್ರ ತಂಡ

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ '777 ಚಾರ್ಲಿ' ಸಿನಿಮಾವು ಯಶಸ್ವಿಯಾಗಿ 25 ದಿನ ಪೂರೈಸಿದೆ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಈ ವೇಳೆ ಚಿತ್ರದ ಕಲೆಕ್ಷನ್‌ ಬಗ್ಗೆಯೂ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

ಈವರೆಗೂ '777 ಚಾರ್ಲಿ' ಸಿನಿಮಾ ಮಾಡಿರುವ ಬ್ಯುಸಿನೆಸ್‌ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ರಕ್ಷಿತ್ ಶೆಟ್ಟಿ ನೀಡಿದ್ದಾರೆ. ಜೊತೆಗೆ ನಿಮಾರ್ಪಕರಿಗೆ ಈ ಸಿನಿಮಾದಿಂದ ಸಿಗುವ ಹಣವೆಷ್ಟು ಎನ್ನುವುದರ ಕುರಿತಾಗಿಯೂ ರಕ್ಷಿತ್‌ ತಿಳಿಸಿದ್ದಾರೆ. ಪ್ರತಿಯೊಂದು ರಾಜ್ಯದಲ್ಲೂ '777 ಚಾರ್ಲಿ' ಸಿನಿಮಾಗೆ ಉತ್ತಮ ಕಲೆಕ್ಷನ್ ಆಗಿದೆ. ಬೇರೆ ಬೇರೆ ಭಾಷೆಗಳಿಂದ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಎಲ್ಲ ಗಳಿಕೆಯನ್ನು ಬೇರೆ ಬೇರೆಯಾಗಿ ಹೇಳುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ, '777 ಚಾರ್ಲಿ' ಸಿನಿಮಾ ಸುಮಾರು 150 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಇದರಲ್ಲಿ ಸುಮಾರು 90ರಿಂದ 100 ಕೋಟಿ ರೂ.ಗಳಷ್ಟು ಹಣ ನಿರ್ಮಾಪಕರ ಕೈಗೆ ಬರುತ್ತದೆ ಎಂದು ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

'ಸದ್ಯ ನಮ್ಮ ಸಿನಿಮಾವು ದೇಶಾದ್ಯಂತ ಸುಮಾರು 450 ಸ್ಕ್ರೀನ್‌ಗಳಲ್ಲಿ 25 ದಿನ ಪ್ರದರ್ಶನ ಕಂಡು, ಮುನ್ನುಗ್ಗುತ್ತಿದೆ. ವೈಯಕ್ತಿಕವಾಗಿ ಇದು ನನಗೆ ದೊಡ್ಡ ಸಾಧನೆ ಎಂದೇ ಹೇಳಬಹುದು. ಇದು ಬರೀ ಸಿನಿಮಾ ಆಗಿರಲಿಲ್ಲ. ಮೂರು ವರ್ಷಗಳ ನಮ್ಮ ಜೀವನಾನುಭವ ಆಗಿತ್ತು. ನಮ್ಮ ಬದುಕಿನ 5% ಭಾಗವನ್ನು ಈ ಒಂದು ಸಿನಿಮಾಗೆ ನೀಡಿದ್ದೇವೆ. ಚಿತ್ರಮಂದಿರದಲ್ಲಿ ಸಿಕ್ಕಿರುವ ರೆಸ್ಪಾನ್ಸ್‌ಗಿಂತ ಓಟಿಟಿಯಲ್ಲಿ ಇನ್ನೂ ದೊಡ್ಡ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇದೆ. ಮುಖ್ಯವಾಗಿ ಪರಭಾಷೆಯಲ್ಲಿ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

ಕನ್ನಡ ಸಿನಿಮಾವನ್ನು ಬೇರೆ ಭಾಷೆಗೆ ಡಬ್ ಮಾಡಿ, ರಿಲೀಸ್ ಮಾಡುವ ಹೊಸ ಅಧ್ಯಾಯವೊಂದನ್ನು 'ಕೆಜಿಎಫ್' ಸಿನಿಮಾ ಶುರು ಮಾಡಿತು. 'ಕೆಜಿಎಫ್: ಚಾಪ್ಟರ್ 1' ಸಿನಿಮಾ ಸೃಷ್ಟಿಸಿದ ಕ್ರೇಜ್, 'ಕೆಜಿಎಫ್: ಚಾಪ್ಟರ್ 2'ಗೆ ದೊಡ್ಡ ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟಿತು. '777 ಚಾರ್ಲಿ' ಬೇರೆಯದೇ ಜಾನರ್‌ನ ಸಿನಿಮಾ. ಈ ಚಿತ್ರಕ್ಕೆ ಬಂದವರೆಲ್ಲ ಹೊಸ ಪ್ರೇಕ್ಷಕರು. ಅವರನ್ನು ಚಿತ್ರಮಂದಿರಕ್ಕೆ '..ಚಾರ್ಲಿ' ಕರೆದುಕೊಂಡು ಬಂತು. ಪರಭಾಷೆಯಲ್ಲಿ ಚಾರ್ಲಿಯಿಂದಾಗಿ ಮತ್ತೊಂದು ಹೊಸ ಅಲೆ ಕ್ರಿಯೆಟ್ ಆಗಿದೆ ಎಂಬುದು ನನ್ನ ಭಾವನೆ' ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

ನಾನು ಸ್ಪೋರ್ಟ್ಸ್ ಕುರಿತ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗಾಗ ನಿರ್ದೇಶಿಸಲುಬಯಸಿದ್ದೆ. 777 ಚಾರ್ಲಿ ಬಿಡುಗಡೆಯಾದ ನಂತರ ಅವರನ್ನು ಸಂಪರ್ಕಿಸಲು ಬಯಸಿದ್ದೆ ಅಪ್ಪು ಸರ್ ಗಡ್ಡದ ಲುಕ್ ನಲ್ಲಿದ್ದ ಫೋಟೋಗಳನ್ನೂ ಕಲೆಕ್ಟ್ ಮಾಡಿದ್ದೆ. ಆದರೆ ನಾವು ನಕ್ಷತ್ರವನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಅಪ್ಪು ಅವರ ಸ್ಥಾನಕ್ಕಾಗಿ ಬೇರೊಬ್ಬ ನಟನಿಗಾಗಿ ಹುಡುಕಾಡುತ್ತಿದ್ದೇನೆ ಎಂದು ನಿರ್ದೇಶಕ ಕಿರಣ್ ರಾಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com