ನನ್ನ ಸಿನಿಮಾದಲ್ಲಿರುವುದು ದಂಪತಿ ನಡುವಿನ ಚೇಷ್ಟೆಯ ಸಂಭಾಷಣೆ ಅಷ್ಟೇ: 'ಪೆಟ್ರೋಮ್ಯಾಕ್ಸ್' ಬಗ್ಗೆ ವಿಜಯ್ ಪ್ರಸಾದ್ ಮಾತು!

ಸಿದ್ದಲಿಂಗು, ನೀರ್ ದೋಸೆ, ಹಾಗೂ ತೋತಾಪುರಿ ಚಿತ್ರಗಳ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರ ಪೆಟ್ರೋಮ್ಯಾಕ್ಸ್,  ಜುಲೈ 15 ರಂದು ಬಿಡುಗಡೆಯಾಗುತ್ತಿದೆ.
ಪೆಟ್ರೋಮ್ಯಾಕ್ಸ್ ಸಿನಿಮಾ ಸ್ಟಿಲ್
ಪೆಟ್ರೋಮ್ಯಾಕ್ಸ್ ಸಿನಿಮಾ ಸ್ಟಿಲ್

ಸಿದ್ದಲಿಂಗು, ನೀರ್ ದೋಸೆ, ಹಾಗೂ ತೋತಾಪುರಿ ಚಿತ್ರಗಳ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರ ಪೆಟ್ರೋಮ್ಯಾಕ್ಸ್,  ಜುಲೈ 15 ರಂದು ಬಿಡುಗಡೆಯಾಗುತ್ತಿದೆ. ಪ್ರತಿ ಚಿತ್ರದಲ್ಲಿಯೂ ಬೋಲ್ಡ್ ಕಂಟೆಂಟ್ ಮತ್ತು ಡಬಲ್ ಮೀನಿಂಗ್ ಡೈಲಾಗ್‌ಗಳೊಂದಿಗೆ ತಮ್ಮ ಹೊಸ ಸಿನಿಮಾ ಮಾಡಿದ್ದಾರೆ.

ನೀನಾಸಂ ಸತೀಶ್‌ ನಾಯಕರಾಗಿರುವ “ಪೆಟ್ರೋಮ್ಯಾಕ್ಸ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರತಂಡ ಬಿಡುಗಡೆಯ ಭರಾಟೆಯಲ್ಲಿ ತೊಡಗಿದೆ. ಚಿತ್ರ ಜುಲೈ 15ರಂದು ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಟ್ರೇಲರ್ ನಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳಿವೆ.  ಹರಿಪ್ರಿಯಾ ಮತ್ತು ನೀನಾಸಂ ಸತೀಶ್ ನಟನೆಯ ಸಿನಿಮಾದಲ್ಲಿ ಬೋಲ್ಡೇ ಡೈಲಾಗ್ ಡೆಲಿವರಿ ಇದೆ.

ವಿಜಯ್ ಪ್ರಸಾದ್ ನಿರ್ದೇಶನದ ನಾಲ್ಕು ಸಿನಿಮಾಗಳಲ್ಲಿ ಸಂಭಾಷಣೆ ಪ್ರಬಲ ಅಂಶವಾಗಿದೆ, ಇದನ್ನು ನಾನು ಡಬಲ್ ಮೀನಿಂಗ್ ಡೈಲಾಗ್ ಎಂದು ಭಾವಿಸುವುದಿಲ್ಲ,ಅವು ಕೇವಲ ಚೇಷ್ಟೆಯ ಸಂಭಾಷಣೆ, ದಂಪತಿ ನಡುವೆ ನಡೆಯುವ ಮಾತುಗಳು ಅಷ್ಟೇ ಎಂದು ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ.

ಚಿತ್ರ ನಿರ್ದೇಶಕರಾಗಿ ನಾನು ಪ್ರೇಕ್ಷಕರನ್ನು ರಂಜಿಸಲು ಹಾಸ್ಯವನ್ನು ದೊಡ್ಡ ಸಾಧನವನ್ನಾಗಿ ನೋಡುತ್ತೇನೆ, ಹಾಸ್ಯದ ಜೊತೆ ಸಾಮಾಜಿಕ ಸಮಸ್ಯೆ ಬೆರೆಸುವ ಉದ್ದೇಶವಿದೆ, ಬೋಲ್ಡ್ ಕಂಟೆಂಟ್ ವಿರೋಧಿಸರುವ ಜನರು ಥಿಯೇಟರ್ ಪ್ರವೇಶಿಸಿದ ನಂತರ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆ ಎಂದು ವಿಜಯ್ ಪ್ರಸಾದ್ ತಿಳಿಸಿದ್ದಾರೆ.

ವಿಜಯಪ್ರಸಾದ್ ಪ್ರಕಾರ ಪೆಟ್ರೋಮ್ಯಾಕ್ಸ್ ಬೆಳಕು ಮತ್ತು ಜೀವನದ ಸಂಕೇತ. ಪೆಟ್ರೋಮ್ಯಾಕ್ಸ್ ಅನ್ನು ಲ್ಯಾಂಟರ್ನ್ ಎಂದು ಕರೆಯಲಾಗುತ್ತದೆ ಇದರ ಜೊತಗೆ, ವೇಶ್ಯಾವಾಟಿಕೆಯನ್ನು ಸೂಚಿಸುತ್ತದೆ. ಉಪದೇಶವನ್ನು  ನೀಡದೆ ಪ್ರೇಕ್ಷಕರನ್ನು ತಲುಪಲು ಒಂದು ನಿರ್ದಿಷ್ಟ ಮಾರ್ಗವಿದೆ. ಇದು ನೀರ್ ದೋಸೆಯ ವಿಷಯವಾಗಿತ್ತು ಮತ್ತು ಪೆಟ್ರೋಮ್ಯಾಕ್ಸ್‌ನಲ್ಲೂ ಅದೇ ಆಗಿರುತ್ತದೆ. ನನ್ನ ಕಂಟೆಂಟ್ ಮತ್ತು ಮೇಕಿಂಗ್ ಅನ್ನು ನಂಬುವ ಪ್ರೇಕ್ಷಕರ ಒಂದು ನಿರ್ದಿಷ್ಟ ವಿಭಾಗವಿದೆ. ತಪ್ಪು ಕಲ್ಪನೆ ಇರುವ ಉಳಿದವರು ನನ್ನ ಕೆಲಸವನ್ನು ಒಮ್ಮೆ ನೋಡಿ ಮನಸ್ಸು ಬದಲಾಯಿಸುತ್ತಾರೆ ಎಂದು ವಿಜಯ್ ಪ್ರಸಾದ್ ತಿಳಿಸಿದ್ದಾರೆ.

ಪೆಟ್ರೋಮ್ಯಾಕ್ಸ್‌ನ ಕಥೆಯು ನಾಲ್ಕು ಅನಾಥರ ಸುತ್ತ ಸುತ್ತುತ್ತದೆ ಮತ್ತು ಅವರ ಪ್ರಯಾಣವು ಹಾಸ್ಯ ಮತ್ತು ಭಾವನೆಗಳ ಅಂಶಗಳನ್ನು ಹೇಗೆ ಸಂಯೋಜಿಸುತ್ತದೆ ಎಂಬುದೇ ಚಿತ್ರದ ಕಥೆ.  ಈ ಚಿತ್ರವನ್ನು ಸತೀಶ್ ಪಿಕ್ಚರ್ಸ್, ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಲಾಗಿದೆ.

ಸತೀಶ್‌ ನೀನಾಸಂ, ವಿಜಯ ಪ್ರಸಾದ್‌ ಹಾಗೂ ಸುಧಿ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯಲಕ್ಷ್ಮೀ ಸಿಂಗ್‌, ಕಾರುಣ್ಯ ರಾಮ್‌, ಅರುಣ್‌, ನಾಗಭೂಷಣ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com