'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ಕೊಡಲು ಹೊರಟಿದ್ದಾರೆ ರಿಷಿ!

ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ  ಝೀ 5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ.
ರಿಷಿ
ರಿಷಿ
Updated on

ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ  ಝೀ 5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ನೋಡಿ ಸ್ವಾಮಿ ಇವನು ಇರೋದೆ ಹೀಗೆ’. ಸದ್ಯ ಈ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆಯುತ್ತಿದೆ.

ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರ ಪ್ರಯೋಗಾತ್ಮಕ ಸಬ್ಜೆಕ್ಟ್ ಒಳಗೊಂಡಿದೆ. ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥಾಹಂದರ ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಡಿಪ್ರೆಷನ್, ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಈ ಎರಡು ಗಂಭೀರ ವಿಚಾರಗಳನ್ನಿಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಕಥೆ ಸೀರಿಯಸ್ ಆಗಿ ಸಾಗುತ್ತಿದ್ರು ನೋಡುಗರಿಗೆ ನಾಯಕನ ಕಷ್ಟ ಕಂಡಾಗ ನಗು ತರಿಸುತ್ತದೆ ಎನ್ನುತ್ತಾರೆ ನಟ ರಿಷಿ.  ಇಂದು ಜನರು ಕೇವಲ ಮನರಂಜನೆಗಾಗಿ ಚಿತ್ರಮಂದಿರಗಳಿಗೆ ಹೋಗುತ್ತಾರೆ ಎಂದು ನಾನು ಅರಿತುಕೊಂಡೆ, ಅಲ್ಲಿ ಅವರು 3 ಗಂಟೆಗಳ ಕಾಲ ತಮ್ಮನ್ನು ತಾವು ಮರೆಯಲು ಬಯಸುತ್ತಾರೆ ಎಂದು ನನಗೆ ತಿಳಿಯಿತು.

ನಾನು ತುಂಬಾ ಸಕಾರಾತ್ಮಕ ವ್ಯಕ್ತಿ, ಪಾತ್ರದ ಕತ್ತಲೆ ಮತ್ತು ಖಿನ್ನತೆಯ ಸ್ಥಿತಿಯೊಂದಿಗೆ ನಾನು ಕನೆಕ್ಟ್ ಆಗಲು ನಿಜವಾಗಿಯೂ ಸಾಧ್ಯವಾಗಲಿಲ್ಲ. ಆದರೆ ವರ್ಷ ಕಳೆದಂತೆ ಹೆಚ್ಚು ಜನರನ್ನು ಭೇಟಿಯಾದ ನಂತರ ನಾನು ಕಥೆಯೊಂದಿಗೆ ನಿಧಾನವಾಗಿ ಹೊಂದಿಕೊಂಡೆ. ನಾನು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರನ್ನು ಭೇಟಿ ಮಾಡಿದ್ದೇನೆ ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಅವರೊಂದಿಗೆ ಮಾತನಾಡುವುದು ನನಗೆ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ನೀಡಿತು ಎಂದು ರಿಷಿಕುಮಾರ್ ಹೇಳಿದ್ದಾರೆ.

ನಾವು ಕಮರ್ಷಿಯಸ್ ಸಿನಿಮಾಗಳನ್ನು ಮಾಡುತ್ತಿರುತ್ತೇವೆ, ಆದರೆ ಸಮಾಜಕ್ಕೆ ಸ್ಪೂರ್ತಿದಾಯಕವಾದ ಕಥೆ ಕೊಡಬೇಕು,  ನಾನು ನಟನಾಗಿ ಸಮಾಜಕ್ಕೆ ಏನು ಕೊಡಬಲ್ಲೆ ಎಂದು ಒಮ್ಮೊಮ್ಮೆ ಯೋಚಿಸುತ್ತೇನೆ? ಈ ಪ್ರಶ್ನೆ ನನ್ನನ್ನು ಯಾವಾಗಲೂ ನನ್ನನ್ನು ಕಾಡುತ್ತಲೇ ಇದೆ.  ಈ ಸಿನಿಮಾಲ್ಲಿ ಖಿನ್ನತೆ ಮತ್ತು ಆತ್ಮಹತ್ಯೆಯಂತಹ ವಿಷಯವನ್ನು ಹೈಲೈಟ್ ಮಾಡಲಾಗಿದೆ ಎಂದು ರಿಷಿ ತಿಳಿಸಿದ್ದಾರೆ.

ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಸಿನಿಮಾದಲ್ಲಿ ರಿಷಿ ಜೊತೆಗೆ ಧನ್ಯಾ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್, ಅಪೂರ್ವಾ ಎಸ್. ಭಾರಾಧ್ವಜ್, ಭವಾನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾದ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಇಸ್ಲಾಹುದ್ದೀನ್ ಎನ್.ಎಸ್. ಕಥೆ ಬರೆದು 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾದ್ ಪಿ, ದುಲೀಪ್ ಕುಮಾರ್ ಎಂ.ಎಸ್ ಛಾಯಾಗ್ರಹಣ, ಪ್ರಸನ್ನ ಶಿವರಾಮನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com