
ಚಂದನವನದಲ್ಲಿ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸೂಕ್ತ ರಿಲೀಸ್ ದಿನಾಂಕಕ್ಕಾಗಿ ಎಲ್ಲ ಚಿತ್ರತಂಡಗಳು ಪ್ರಯತ್ನಿಸುತ್ತಿವೆ. ಜುಲೈ 28 ವಿಕ್ರಾಂತ್ ರೋಣ ಚಿತ್ರ ಬಿಡುಗಡೆ ಆಗಲಿದೆ. ಮರುದಿನವೇ ಅಂದರೆ, ಜುಲೈ 29ರಂದು ‘ರಕ್ಕಂ’ ಚಿತ್ರ ರಿಲೀಸ್ ಆಗುತ್ತಿದೆ.
ನಿರ್ದೇಶಕ ಸೆಂದಿಲ್ ಅವರು ಮೂಲತಃ ರಂಗಭೂಮಿ ಕಲಾವಿದ. ಎನ್ಎಸ್ಡಿಯಲ್ಲಿ ತರಬೇತಿ ಪಡೆದುಕೊಂಡ ಬಂದಿರುವ ಅವರು ವಿವಿಧ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಇದು ಸೆಂದಿಲ್ ಅವರ ಮೊದಲ ನಿರ್ದೇಶನದ ಸಿನಿಮಾ. ನೋಟ್ ಬ್ಯಾನ್ ಮಾಡಿದ ಸಮಯದಲ್ಲಿ ಹುಟ್ಟಿದ ಕಥೆಯನ್ನು ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ. ‘ರಕ್ಕಂ’ ಎಂದರೆ ಹಣದ ಗಂಟು ಎಂಬ ಅರ್ಥವಿದೆ’.
ಶ್ರೀವತ್ಸ ಸಂಗೀತ ನಿರ್ದೇಶನ, ಶಾಮ್ ಸಾಲ್ವಿನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಈ ಸಿನಿಮಾ ‘ನಮ್ಮ ಹೈಕ್ಳು ಚಿತ್ರ’ ಬ್ಯಾನರ್ ಮೂಲಕ ತಯಾರಾಗಿದೆ.
ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ರಣಧೀರ್ ಗೌಡ ನಾಯಕನಾಗಿ ನಟಿಸಿದ್ದಾರೆ. ಅಮೃತಾ ನಾಯರ್ ನಾಯಕಿ. ಹಿರಿಯ ಕಲಾವಿದ ನಂಜಪ್ಪ ಬೆನಕ, ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ ಅವರು ಸೇರಿದಂತೆ ಹಲವರು ನಟಿಸಿದ್ದಾರೆ.
Advertisement