ಗಿರೀಶ್ ಮೂಲಿಮನೆ ನಿರ್ದೇಶನದ ಸಿನಿಮಾದಲ್ಲಿ ಪ್ರಮೋದ್ ಗೆ ರಾಚೇಲ್ ಡೇವಿಡ್ ನಾಯಕಿ!
ಲವ್ ಮಾಕ್‌ಟೇಲ್ 2 ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಚೆಲ್ ಡೇವಿಡ್ ಈಗ ತಮ್ಮ ಮೂರನೇ ಕನ್ನಡ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ.
ಇನ್ನೂ ಟೈಟಲ್ ಫಿಕ್ಸ್ ಆಗದ ಸಿನಿಮಾಗೆ ಗಿರೀಶ್ ಮೂಲಿಮನೆ ನಿರ್ದೇಶಿಸಿದ್ದಾರೆ, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತು ದಿಯಾ ನಟ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿದ್ದಾರೆ.
ಇದು ಎರಡು ಸಮಾನಾಂತರ ಕಥೆಗಳನ್ನು ಹೊಂದಿರುವ ಪ್ರವಾಸ ಸಿನಿಮಾವಾಗಿದ್ದು, ಇಬ್ಬರು ನಾಯಕಿಯರಿದ್ದಾರೆ. ಪ್ರಮೋದ್ ಎದುರು ರಾಚೆಲ್ ಡೇವಿಡ್ ಜೋಡಿಯಾಗಿದ್ದಾರೆ. 'ರಾಜರು' ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗಿರೀಶ್ ಮೂಲಿಮನಿ ಅವರ ಎರಡನೇ ಡೈರೆಕ್ಷನ್ ಚಿತ್ರ ಇದಾಗಿದೆ. ಜೂನ್ 23 ರಂದು ಚಿತ್ರದ ಟೈಟಲ್ ಜೊತೆ ಮೂಹೂರ್ತ ಆರಂಭವಾಗಲಿದೆ. ಜುಲೈ 1 ರಿಂದ ಶೂಟಿಂಗ್ ಆರಂಭವಾಗಲಿದೆ.
ಡಾನ್ ನಿರ್ದೇಶನದ ಡಾರ್ಕ್ ವೆಬ್ ಥ್ರಿಲ್ಲರ್ 'ಎಟಿ' ಶೀರ್ಷಿಕೆಯ ಮಲಯಾಳಂ ಚಿತ್ರದ ಚಿತ್ರೀಕರಣವನ್ನು ರಾಚೆಲ್ ಪೂರ್ಣಗೊಳಿಸಿದ್ದಾರೆ. ಕಂಟ್ರಿ ಮೇಡ್ ಚಿತ್ರೀಕರಣವನ್ನೂ ಆರಂಭಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ