
ಚಿರಂಜೀವಿ ಸರ್ಜಾ ಅವರ ಖಾಕಿ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕನಾಗಿ ಗುರುತಿಕೊಂಡ ನವೀನ್ ರೆಡ್ಡಿ ಬಿ, ಈಗ ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಅವರ ಎರಡನೇ ಸಿನಿಮಾ ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ.
ಮಾದೇವ ಎಂಬ ಶೀರ್ಷಿಕೆಯ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಸಿನಿಮಾದ ಕೆಲವು ಸ್ಟಿಲ್ ಗಳನ್ನು ಸಿನಿಮಾ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.
ಇದು 80 ರ ದಶಕದ ಕಥೆಯನ್ನು ಒಳಗೊಂಡಿದ್ದು, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭಾವಾನಾತ್ಮಕ ಕಥೆಯಾಗಿದೆ. ಜೈಲು ಮತ್ತು ರೈಲಿನ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ ಎಂದು ನಿರ್ದೇಶಕ ನವೀನ್ ರೆಡ್ಡಿ ತಿಳಿಸುತ್ತಾರೆ.
ಜುಲೈ 21 ರಂದು ಚಿತ್ರ ಸೆಟ್ಟೇರಲಿದ್ದು, ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ.ಬಾಲಕೃಷ್ಣ ತೋಟ ಛಾಯಾಗ್ರಹಣವಿದೆ. ನಿರ್ಮಾಪಕಿ ಗಾಯತ್ರಿ ಆರ್ ಹಳಲೆ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರದ್ದ್ಯೋತ್ತನ್ ಸಂಗೀತ ನೀಡಲಿದ್ದಾರೆ.
ಶೃತಿ, ಅಚ್ಯುತ್ ಕುಮಾರ್ ಮತ್ತು ಶುದ್ದಿ ಚಿತ್ರಕ್ಕಾಗಿ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ, ರಾಬರ್ಟ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ವಿನೋದ್ ಪ್ರಭಾಕರ್ ಅವರ ಮುಂದಿನ ಚಿತ್ರ ಲಂಕಾ ಸುರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಾಯಕಿ ಪಾತ್ರಕ್ಕಾಗಿ ಇನ್ನೂ ಆಯ್ಕೆ ನಡೆಯುತ್ತಿದೆ.
Advertisement