'ಬನಾರಸ್' ಸಿನಿಮಾದಿಂದ ಹಾಡಾಗಿ ಹರಿದ 'ಮಾಯಾ ಗಂಗೆ': ಜೈದ್ ಖಾನ್ ನಟನೆಯ ಮೊದಲ ಸಾಂಗ್ ರಿಲೀಸ್

ಜಯತೀರ್ಥ ಅವರ ನಿರ್ದೇಶನದ 'ಬನರಾಸ್‌' ಚಿತ್ರದ 'ಮಾಯಾ ಗಂಗೆ' ಎಂಬ ಮೊದಲ ಹಾಡನ್ನು ಸೋಮವಾರ ಅಭಿಷೇಕ್‌ ಅಂಬರೀಷ್‌, ವಿನೋದ್ ಪ್ರಭಾಕರ್ ಹಾಗೂ ಶೈಲಜಾನಾಗ್ ಅವರು ಬಿಡುಗಡೆ ಮಾಡಿದ್ದಾರೆ.
ಜೈದ್ ಖಾನ್ ಮತ್ತು ಸೋನಾಲ್ ಮಾಂಟೆರಿಯೋ
ಜೈದ್ ಖಾನ್ ಮತ್ತು ಸೋನಾಲ್ ಮಾಂಟೆರಿಯೋ

ಜಯತೀರ್ಥ ಅವರ ನಿರ್ದೇಶನದ 'ಬನರಾಸ್‌' ಚಿತ್ರದ 'ಮಾಯಾ ಗಂಗೆ' ಎಂಬ ಮೊದಲ ಹಾಡನ್ನು ಸೋಮವಾರ ಅಭಿಷೇಕ್‌ ಅಂಬರೀಷ್‌, ವಿನೋದ್ ಪ್ರಭಾಕರ್ ಹಾಗೂ ಶೈಲಜಾನಾಗ್ ಅವರು ಬಿಡುಗಡೆ ಮಾಡಿದ್ದಾರೆ.

ಇಡೀ ಬನರಾಸ್‌ ಚಿತ್ರದ ಭಾವನೆಯನ್ನು ಮಾಯಾ ಗಂಗೆ ಹಾಡು ಪ್ರತಿನಿಧಿಸುತ್ತದೆ. ಕಾಶಿಯನ್ನು ಭಿನ್ನವಾಗಿ ಮತ್ತು ವಿಸ್ತೃತವಾಗಿ ತೋರಿಸಲಾಗಿದೆ. ಯಾರು ಈ ರೀತಿ ತೋರಿಸಲಾರರು. ನಾವು 'ಬನರಾಸ್‌' ಚಿತ್ರದಲ್ಲಿ ಕಾಶಿಯ ಕಾವ್ಯಾತ್ಮಕ ಮುಖವನ್ನು ಈ ಹಾಡಿನಲ್ಲಿ ತೋರಿಸಿದ್ದೀವಿ. ಕಾಶಿಯ ಎಲ್ಲ 64 ಘಾಟಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಕಾಶಿಯಲ್ಲಿನ ನೋಟ ಮತ್ತು ಪ್ರೀತಿ ಎಲ್ಲವು ಈ ಹಾಡಿನಲ್ಲಿ ಸಿಗಬೇಕು ಎಂದು ಕೇಳಿಕೊಂಡಾಗ ನಾಗೇಂದ್ರ ಪ್ರಸಾದ್‌ ಅವರು ಈ ಹಾಡನ್ನು ಬರೆದಿದ್ದಾರೆ. 'ಮಾಯ ಗಂಗೆ' ಹಾಡಿನ ಚಿತ್ರೀಕರಣ ಕಾಶಿಯಲ್ಲೇ ಮಾಡಲಾಗಿದೆ. ಹಾಡಿನಲ್ಲಿ ಕಾಶಿಯಲ್ಲಿರುವ ವೈಶಿಷ್ಟ್ಯತೆ ಮತ್ತು ಗಂಗೆಯ ಪ್ರೀತಿ ಎಲ್ಲವೂ ವ್ಯಕ್ತವಾಗುತ್ತದೆ.

'ಬನಾರಸ್‌'ನ 'ಮಾಯಾ ಗಂಗೆ' ಮೊದಲ ವಿಡಿಯೋ ಹಾಡನ್ನು ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ ಪ್ರಸ್ತುತಪಡಿಸುತ್ತಿದ್ದು, ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ. ಝೈದ್ ಖಾನ್ ಮತ್ತು ಸಯೋನ್‌ರೋನ್ ಅವರು ಚಿತ್ರದ ನಾಯಕ ಮತ್ತು ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ತಿಲಕರಾಜ್ ಬಲ್ಲಾಳ್ ಅವರು ನಿರ್ಮಾಣ ಮಾಡಿದ್ದಾರೆ.

ತಾರಾಗಣದಲ್ಲಿ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್,  ಸ್ವಪ್ನಾ ಮುಂತಾದವರು ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಅಜನೀಶ್ ಬಿ ಲೋಕನಾಥ್ ಅವರ ಸಂಗೀತವಿದೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು ಶೀಘ್ರವೇ ದಿನಾಂಕ ಘೋಷಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com