ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಿದ್ಧ

ದರ್ಶನ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಗಣರಾಜ್ಯೋತ್ಸವದಂದು, ಸಿನಿಮಾ ಬಿಡುಗಡೆಗೆ ಚಿತ್ರ ತಂಡ ನಿರ್ಧರಿಸಿದ್ದು, ಚಿತ್ರದ ಬಿಡುಗಡೆ ಬಗ್ಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದಾರೆ. 
ಕ್ರಾಂತಿ (ಸಂಗ್ರಹ ಚಿತ್ರ)
ಕ್ರಾಂತಿ (ಸಂಗ್ರಹ ಚಿತ್ರ)
Updated on

ದರ್ಶನ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಗಣರಾಜ್ಯೋತ್ಸವದಂದು, ಸಿನಿಮಾ ಬಿಡುಗಡೆಗೆ ಚಿತ್ರ ತಂಡ ನಿರ್ಧರಿಸಿದ್ದು, ಚಿತ್ರದ ಬಿಡುಗಡೆ ಬಗ್ಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದಾರೆ. 

ದರ್ಶನ್ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು, ರಾಬರ್ಟ್ ಬಳಿಕ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿದೆ.

ಸಿನಿಮಾ ಬಿಡುಗಡೆಯ ಘೋಷಣೆಯ ಕಾರ್ಯಕ್ರಮದಲ್ಲಿ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ದರ್ಶನ್, ಸಿನಿಮಾದ ಕಥಾವಸ್ತುವಿನೊಂದಿಗೆ ರಾಜಿಯಾಗದೇ ಮಾಸ್ ವೀಕ್ಷಕರನ್ನು ರಂಜಿಸುವುದೇ ತಮ್ಮ ವೈಶಿಷ್ಟ್ಯವಾಗಿದೆ ಎಂದು ಹೇಳಿದ್ದಾರೆ.

ಕ್ರಾಂತಿ ಸಿನಿಮಾದಲ್ಲಿ ನಾಮಸೂಚಕ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ವಿ ಹರಿಕೃಷ್ಣ ಅವರ ಕ್ರಾಂತಿ ಸರ್ಕಾರಿ ಶಾಲೆಗಳ ಸುತ್ತ ಹೆಣೆಯಲಾಗಿರುವ ಕಥಾವಸ್ತುವಾಗಿದ್ದು, ಸರ್ಕಾರಿ ಶಾಲೆಯಲ್ಲೇ ಓದಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸರ್ ಎಂ ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರುಗಳ ಉದಾಹರಣೆಯನ್ನು ನೀಡಿದ್ದಾರೆ. 

ನಮ್ಮ ದೇಶದಲ್ಲಿ ಸರ್ಕಾರಿ ಶಾಲೆಗಳ ಮಹತ್ವ ಕಡಿಮೆಯಾಗುತ್ತಿದ್ದು, ಶಿಕ್ಷಣ ಖಾಸಗೀಕರಣದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರಾಂತಿ ಈ ಎಲ್ಲಾ ಪ್ರಮುಖ ಥೀಮ್ ಅನ್ನು ನಿಭಾಯಿಸುತ್ತದೆ ಹಾಗೂ ಅಕ್ಷರ ಕ್ರಾಂತಿ ಸಿನಿಮಾದ ಸಂದೇಶವಾಗಿರಲಿದೆ ಎಂದು ದರ್ಶನ್ ಹೇಳಿದ್ದಾರೆ.

ಕೆಲಸ ಮಾತನಾಡಬೇಕು ಎಂಬ ಮಾತಿಗೆ ಹೆಚ್ಚು ಒತ್ತು ನೀಡುತ್ತಾರೆ ಹಾಗೂ ಕ್ರಾಂತಿ ಸಿನಿಮಾಗೆ ಸಂಬಂಧಿಸಿದಂತೆ ಅತ್ಯಂತ ಆಕರ್ಷಕ ಸಂಗತಿಗಳನ್ನು ಹೊಂದಿದ್ದಾರೆ ಹಾಗೂ ಅದನ್ನು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸಲಿದ್ದಾರೆ.

ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನಡಿಯಲ್ಲಿ ಶೈಲಜಾ ನಾಗ್ ಕ್ರಾಂತಿ ಸಿನಿಮಾದ ನಿರ್ಮಾಪಕಿಯಾಗಿದ್ದು, ಬಿ ಸುರೇಶ ಸಹ ನಿರ್ಮಾಪಕರಾಗಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆ ದಿನದಂದೇ ಚಿತ್ರ ಬಿಡುಗಡೆಗೆ ಸೂಕ್ತ ದಿನ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಯಜಮಾನ ಸಿನಿಮಾ ಬಳಿಕ ಚಿತ್ರ ತಂಡ ದರ್ಶನ್ ಜೊತೆಗೆ ಎರಡನೇ ಬಾರಿಗೆ ಜೊತೆಗೂಡಿದ್ದು, ಪ್ರೊಡಕ್ಷನ್ ಹೌಸ್ ಆಗಿ ನಾವು ಹಲವು ಆಫ್‌ಬೀಟ್ ಚಲನಚಿತ್ರಗಳನ್ನು ಮಾಡಿದ್ದೇವೆ. ಆದರೆ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಅದರಲ್ಲೂ ದರ್ಶನ್ ಅವರಂತಹ ಸೂಪರ್ ಸ್ಟಾರ್ ಮೂಲಕ ವಿಷಯಾಧಾರಿತ ಕಥೆ ನಿರೂಪಣೆ ಮಾಡುವುದು ನಿಜವಾದ ಸವಾಲು ಈ ದೃಷ್ಟಿಯಿಂದ ಹರಿಕೃಷ್ಣ ಉತ್ತಮ ಕೆಲಸ ಮಾಡಿದ್ದಾರೆ ಕ್ರಾಂತಿ ಸಿನಿಮಾ ಕಮರ್ಷಿಯಲ್ ಮನರಂಜನೆ ಹಾಗೂ ಕಂಟೆಂಟ್ ಎರಡೂ ಹೊಂದಿರುವ ಉತ್ತಮ ಚಿತ್ರವಾಗಿರಲಿದೆ ಎಂದು ಚಿತ್ರ ತಂಡ ವಿಶ್ವಾಸ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com