ಅಮಿತಾಭ್ ಬಚ್ಚನ್‌ ಗೂ ಕೇತುದೆಸೆ ಇತ್ತು; ಹೀಗಾಗಿ 7 ವರ್ಷ ಮನೆಯಲ್ಲಿಯೇ ಕೂರಬೇಕಾಗಿತ್ತು; ಕೋಮಲ್ ಗೂ ಹಾಗೆಯೇ ಇತ್ತು: ಜಗ್ಗೇಶ್

ಕಾಮಿಡಿ ಪಾತ್ರಗಳ ಮೂಲಕ ನಟ ಜಗ್ಗೇಶ್ ಸಹೋದರ ಕೋಮಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರು ಏಕಾಏಕಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಈಗ ಅವರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.
ಜಗ್ಗೇಶ್ ಮತ್ತು ಕೋಮಲ್
ಜಗ್ಗೇಶ್ ಮತ್ತು ಕೋಮಲ್

ಕಾಮಿಡಿ ಪಾತ್ರಗಳ ಮೂಲಕ ನಟ ಜಗ್ಗೇಶ್ ಸಹೋದರ ಕೋಮಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರು ಏಕಾಏಕಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಈಗ ಅವರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.

ಚಿತ್ರರಂಗದಿಂದ ಕೋಮಲ್ ದೂರ ಉಳಿದಿದ್ದು ಏಕೆ ಎನ್ನುವ ಪ್ರಶ್ನೆಗೆ ಜಗ್ಗೇಶ್ ಉತ್ತರ ನೀಡಿದ್ದಾರೆ. ‘ಕೋಮಲ್​ಗೆ ಕೇತುದೆಸೆ ಇತ್ತು, 7 ವರ್ಷ ಸಿನಿಮಾ ಮಾಡಬೇಡ ಅಂತ ನಾನೇ ಹೇಳಿದ್ದೆ’ ಎಂದಿದ್ದಾರೆ ಜಗ್ಗೇಶ್. ಈ ದೆಸೆ ಬಂದಾಗ ಎಚ್ಚರಿಕೆ ಹೆಜ್ಜೆಯಿಡಬೇಕು. ಅಮಿತಾಬ್ ಬಚ್ಚನ್ ಗೂ ಇದೇ ರೀತಿ ದೆಸೆಯಿತ್ತು, ಅವರು ಕೂಡ 7 ವರ್ಷ ಮನೆಯಲ್ಲಿ ಕೂತಿದ್ದರು ಎಂದು ಹೇಳಿದ್ದಾರೆ.

ಸಮಯ ಸರಿ ಇಲ್ಲ ಅಂತ 5 ವರ್ಷ ಎಲ್ಲದರಿಂದ ಬ್ರೇಕ್ ತಗೊಂಡಿದ್ದೆ. ಕೇತುದೆಸೆಯಲ್ಲಿ ಏನೂ ಮಾಡಬಾರದು ಅಂತಾರೆ. ಸಮಯ ನಿಲ್ಲೋದಿಲ್ಲ, ಯಾರ ಮಾತನ್ನು ಕೇಳೋದಿಲ್ಲ, ಆ ಟೈಮ್‌ನಲ್ಲಿ ಏನಾಗಬೇಕೋ ಅದು ಆಗಿಯೇ ತೀರತ್ತೆ. ಇದೇ ನಮ್ಮ ಸಿನಿಮಾದ ಕಥೆ.

ಇದರ ಜತೆ ಇನ್ನೂ 3-4 ಸಿನಿಮಾ ಒಪ್ಪಿಕೊಂಡಿದ್ದೇನೆ. ಎಮಿಲ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್ ಅವರ ಪಾತ್ರ ಇಡೀ ಚಿತ್ರದ ಜೀವಾಳ. ತಿಲಕ್ ಅವರು ಈ ಚಿತ್ರದಲ್ಲಿ ಸಿವಿಲ್ ಇಂಜಿನಿಯರಿಂಗ್ ಪಾತ್ರ ಮಾಡಿದ್ದಾರೆ" ಎಂದು ಹೇಳಿದ್ದಾರೆ ನಟ ಕೋಮಲ್.

"ಕಾಲಾಯ ನಮಃ" ಎನ್ನುವ ಸಿನಿಮಾದಲ್ಲಿ ಕೋಮಲ್ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಗೆ ಕೋಮಲ್ ಜತೆ ಅವರ ಸಹೋದರ ಜಗ್ಗೇಶ್ ಹಾಗೂ ಅವರ ಪುತ್ರ ಯತಿರಾಜ್ ಕೂಡ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com