ಗೌತಮ್ ವಿಮಲ್ ನಿರ್ದೇಶನದ 'ಕೈಮರ' ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ, ಛಾಯಾ ಸಿಂಗ್!

ವಿಜಯ ದಶಮಿಯ ಶುಭದಿನದಂದು ವಿ.ಮತ್ತಿಯಳಗನ್ ನಿರ್ಮಾಣದ, ಗೌತಮ್ ವಿಮಲ್ ನಿರ್ದೇಶನದ ಹಾಗೂ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿರುವ 'ಕೈಮರ' ಚಿತ್ರದ ಮುಹೂರ್ತ ನೆರವೇರಿತು.
ಕೈಮರ ಸಿನಿಮಾ ಮೂಹೂರ್ತ
ಕೈಮರ ಸಿನಿಮಾ ಮೂಹೂರ್ತ

ಗೌತಮ್ ವಿಮಲ್ ನಿರ್ದೇಶನದ  ಕೈಮರ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ , ಪ್ರಿಯಮಾಣಿ ಹಾಗೂ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.  

ವಿಜಯ ದಶಮಿಯ ಶುಭದಿನದಂದು ವಿ.ಮತ್ತಿಯಳಗನ್ ನಿರ್ಮಾಣದ, ಗೌತಮ್ ವಿಮಲ್ ನಿರ್ದೇಶನದ ಹಾಗೂ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿರುವ 'ಕೈಮರ' ಚಿತ್ರದ ಮುಹೂರ್ತ ನೆರವೇರಿತು.

ವಿಜಯ ದಶಮಿ ಶುಭದಿನದಂದು “ಕೈಮರ” ಚಿತ್ರ ಆರಂಭವಾಗಿದೆ. ಖ್ಯಾತ ನಿರ್ದೇಶಕ ಪಿ.ವಾಸು ಅವರ ತಮ್ಮನ ಮಗ ಗೌತಮ್ ವಿಮಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತಿಯಳಗನ್ ಅವರು ನಿರ್ಮಾಣದೊಂದಿಗೆ ನಟನೆಯನ್ನು ಮಾಡುತ್ತಿದ್ದಾರೆ.  

ಇದೊಂದು ಹಾರಾರ್ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ ಸಹ. ಕಳೆದ ಮೂರುವರ್ಷಗಳಿಂದ “ಕೈಮರ” ಕುರಿತಾದ ಕೆಲಸಗಳು ನಡೆಯುತ್ತಿದ್ದವು. ಕೊರೋನ ಕಾರಣದಿಂದ ಚಿತ್ರೀಕರಣ ಆರಂಭವಾಗುವು ಸ್ವಲ್ಪ ತಡವಾಯಿತು. ಈಗ ದಸರಾದ ಶುಭದಿನದಲ್ಲಿ ಮುಹೂರ್ತ ನಡೆದಿದೆ. ಅಕ್ಟೋಬರ್ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

“ಕೈಮರ” ಚಿತ್ರ ಮಾಮೂಲಿ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿರಲಿದೆ.‌ ನಿರ್ದೇಶಕ ಗೌತಮ್ ಈ ಚಿತ್ರ ಉತ್ತಮವಾಗಿ ಬರಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಪಿ. ವಿಮಲ್ ಕಥೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ “ಕೈಮರ” ದಲ್ಲಿರಲಿದೆ.‌  ಅಕ್ಟೋಬರ್ 10 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com