ಖ್ಯಾತ ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ನಾಯಕನಾಗಿ ನಟಿಸಿರುವ, ಕಿರಣ್ ಸೂರ್ಯ ನಿರ್ದೇಶನದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಏತನ್ಮಧ್ಯೆ, ನಿರ್ದೇಶಕರು ತಮ್ಮ ಎರಡನೇ ಸಿನಿಮಾಗಾಗಿ ಕೆಲಸ ಆರಂಭಿಸಿದ್ದು, ಹಿರಿಯ ನಟ ಟಿ ಎನ್ ಬಾಲಕೃಷ್ಣ ನೇತೃತ್ವದ ಹೆಸರಾಂತ ನಿರ್ಮಾಣ ಸಂಸ್ಥೆ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ.
ಈ ಹಿಂದೆ ಈ ಪ್ರೊಡಕ್ಷನ್ ಹೌಸ್ 8 ಚಿತ್ರಗಳನ್ನು ನಿರ್ಮಾಣ ಮಾಡಿದೆ. ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್ ಬಿಎಸ್ ಇದರ ಜವಾಬ್ದಾರಿಯನ್ನು ಹೊತ್ತಿದ್ದು, ವಿರಾಮದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.
ಸಿನಿಮಾ ನಾಯಕನಾಗಿ ನಟಿಸಲು ತಮಿಳು ನಟ ಅರ್ಜುನ್ ದಾಸ್ (ಕೈತಿ, ಮಾಸ್ಟರ್ ಮತ್ತು ವಿಕ್ರಮ್ಫೇಮ್) ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಚಿತ್ರ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸದ್ಯ ಸಿನಮಾ ಸ್ಕ್ರಿಪ್ಟಿಂಗ್ ಹಂತದಲ್ಲಿದೆ, 2023 ರಲ್ಲಿ ಸಿನಿಮಾ ಆರಂಭಿಸಲು ನಿರ್ದೇಶಕ ಕಿರಣ್ ಸೂರ್ಯ ಯೋಜಿಸುತ್ತಿದ್ದಾರೆ.
Advertisement