
ಬೆಂಗಳೂರು: ದಿವಂಗತ ಪುನೀತ್ ಅವರ ‘ಗಂಧದ ಗುಡಿ’ ಡಾಕ್ಯುಮೆಂಟರಿ ರಿಲೀಸ್ಗೆ ರೆಡಿ ಇದೆ. ಶುಕ್ರವಾರ (ಅಕ್ಟೋಬರ್ 28) ಈ ಸಾಕ್ಷ್ಯಚಿತ್ರ ಬಿಡುಗಡೆ ಆಗುತ್ತಿದೆ. ಈ ಮಧ್ಯೆ ಪುನೀತ್ ಅವರ ಹಳೆಯ ಟ್ವೀಟ್ ವೈರಲ್ ಆಗಿದೆ.
ಪುನೀತ್ ರಾಜ್ಕುಮಾರ್ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದ ವ್ಯಕ್ತಿ. ಕೇವಲ ನಟನೆ ಮಾತ್ರವಲ್ಲದೆ ನಿರ್ಮಾಣದಲ್ಲೂ ಬ್ಯುಸಿ ಇದ್ದರು. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಪುನೀತ್ ರಾಜ್ಕುಮಾರ್ ಅವರು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಮಾಡುತ್ತಾರೆ ಎಂಬುದು ಮೊದಲೇ ಚರ್ಚೆಯಲ್ಲಿತ್ತು. ಕಳೆದ ವರ್ಷ ಇದೇ ದಿನ (ಅಕ್ಟೋಬರ್ 27,2021) ಅಪ್ಪು ಈ ಬಗ್ಗೆ ಒಂದು ಅಪ್ಡೇಟ್ ನೀಡಿದ್ದರು.
‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್ ಟ್ವೀಟ್ ಮಾಡಿದ್ದರು. ಇದರಲ್ಲಿ ನವೆಂಬರ್ 1ರಂದು ವಿಶೇಷ ಘೋಷಣೆ ಮಾಡುವ ವಿಚಾರ ತಿಳಿಸಿದ್ದರು. ಈ ಟ್ವೀಟ್ ಮಾಡಿದ ಎರಡೇ ದಿನಕ್ಕೆ ಪುನೀತ್ ಹೃದಯಾಘಾತದಿಂದ ನಿಧನ ಹೊಂದಿದರು.
Advertisement